ತುಮಕೂರಿನಲ್ಲಿ ಅಥ್ಲೆಟಿಕ್ಸ್‌: ಪ್ರಶೂಲ್ ದಾಖಲೆ

7

ತುಮಕೂರಿನಲ್ಲಿ ಅಥ್ಲೆಟಿಕ್ಸ್‌: ಪ್ರಶೂಲ್ ದಾಖಲೆ

Published:
Updated:
Deccan Herald

ತುಮಕೂರು: ಅಪೂರ್ವ ಸಾಮರ್ಥ್ಯ ಮೆರೆದ ಉಡುಪಿ ಜಿಲ್ಲೆಯ ಪ್ರಶೂಲ್ ಪಿ.ಪೂಜಾರಿ, 14 ವರ್ಷದೊಳಗಿನವರ ರಾಜ್ಯ ಅಥ್ಲೆಟಿಕ್ಸ್ ಕೂಟದ ಬಾಲಕರ ಹೈಜಂಪ್‌ನಲ್ಲಿ ಕೂಟ ದಾಖಲೆ ಬರೆದರು.

ಇಲ್ಲಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ಕೂಟದಲ್ಲಿ ಅವರು 1.68 ಮೀಟರ್ ಎತ್ತರ ಜಿಗಿದು ಈ ಸಾಧನೆ ಮಾಡಿದರು. 2016ರಲ್ಲಿ ದಕ್ಷಿಣ ಕನ್ನಡದ ದೀಪಕ್ 1.63 ಮೀಟರ್ ಎತ್ತರ ಜಿಗಿದಿದ್ದರು.‌

ಮೊದಲ ದಿನದ ಫಲಿತಾಂಶ

ಬಾಲಕರ 600 ಮೀಟರ್ಸ್ ಓಟ: ಸಿ.ಎಚ್.ಐವನ್ (ದಕ್ಷಿಣ ಕನ್ನಡ)–1. ಕಾಲ:1 ನಿಮಿಷ 23.07 ಸೆಕೆಂಡು, ರಮೇಶ್ (ವಿದ್ಯಾನಗರ ಕ್ರೀಡಾಶಾಲೆ, ಬೆಂಗಳೂರು)–2, ಹನುಮೇಶ (ಉಡುಪಿ)–3.

ಹೈಜಂಪ್‌: ಪ್ರಶೂಲ್ ಪಿ.ಪೂಜಾರಿ (ಉಡುಪಿ)–1. ಎತ್ತರ: 1.68 ಮೀಟರ್ (ಕೂಟ ದಾಖಲೆ), ಭೀಮೇಶ್ (ಬೆಂಗಳೂರು ಉತ್ತರ)–2, ಕಿರಣ ಜಿ.ಕೊರಚರ (ಶಿರಸಿ)–3.

ಬಾಲಕಿಯರ 600 ಮೀ ಓಟ: ಕೆ.ಇ.ರೂಪ (ದಕ್ಷಿಣ ಕನ್ನಡ)–1. ಕಾಲ: 1 ನಿ 42.56 ಸೆ, ಎಸ್.ಡಿ.ಪರಿಮಳ (ಹಾಸನ)–2, ಪ್ರಿಯಾಂಕ ಓಲೇಕಾರ (ಧಾರವಾಡ)–3;

ಲಾಂಗ್ ಜಂಪ್‌: ವೆಲೆನ್ಸಿಯಾ ಬೆಳಗಾಂವಕರ್ (ಉತ್ತರ ಕನ್ನಡ)–1. ದೂರ: 4.63 ಮೀಟರ್, ಸೌಜನ್ಯ (ದಕ್ಷಿಣ ಕನ್ನಡ)–2, ರೂಪಿಕಾ ಗೌಡ (ಹಾಸನ)–3. ಶಾಟ್‌ಪಟ್‌: ಶಿಫಾ ತಹಶೀಲ್ದಾರ್ (ಬೆಳಗಾವಿ)–1. ದೂರ: 10.02 ಮೀ, ಹರ್ಷಿತ್ ಎ.ಸಾಲಿಯಾನ್ (ದಕ್ಷಿಣ ಕನ್ನಡ)–2, ಎಸ್.ಕೆ.ರಿಯಾ (ಮೈಸೂರು)–3.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !