ಗೊರಬಾಳ: ಮೇಕೆ ಕಳ್ಳತನ ಮಾಡಿದ ಆರೋಪ; ಬಾಲಕನ ಮರಕ್ಕೆ ಕಟ್ಟಿ ಹಾಕಿ ಥಳಿಸಿದರು

7

ಗೊರಬಾಳ: ಮೇಕೆ ಕಳ್ಳತನ ಮಾಡಿದ ಆರೋಪ; ಬಾಲಕನ ಮರಕ್ಕೆ ಕಟ್ಟಿ ಹಾಕಿ ಥಳಿಸಿದರು

Published:
Updated:
Deccan Herald

ಬಾಗಲಕೋಟೆ: ಇಳಕಲ್ ತಾಲ್ಲೂಕಿನ ಗೊರಬಾಳ ಗ್ರಾಮದಲ್ಲಿ ಶನಿವಾರ ಆಡು (ಮೇಕೆ) ಕದ್ದ ಆರೋಪದ ಮೇಲೆ ಬಾಲಕನನ್ನು ಮರಕ್ಕೆ ಕಟ್ಟಿ ಥಳಿಸಲಾಗಿದೆ.

ಇಳಕಲ್‌ನ ಆಲಂಪುರ ಪೇಟೆಯ ನಿವಾಸಿಯಾದ 16 ವರ್ಷದ ಬಾಲಕ ತನ್ನ ಮಾವನೊಂದಿಗೆ ಸೇರಿ ಗೊರಬಾಳದ ದೊಡ್ಡಿಯೊಂದರಲ್ಲಿ ಆಡು ಕದ್ದಿದ್ದನು ಎಂದು ಹೇಳಲಾಗಿದೆ.

ಕಳೆದ ನಾಲ್ಕು ತಿಂಗಳಿನಿಂದ ಈ ಭಾಗದಲ್ಲಿ ಹತ್ತಾರು ಕುರಿಗಳ ಕಳ್ಳತನ ಆಗಿದ್ದವು. ಅವುಗಳ ಹುಡುಕಾಟದಲ್ಲಿ ತೊಡಗಿದ್ದ ಕುರಿಗಳ ಮಾಲೀಕರು, ಶನಿವಾರ ಅಮೀನಗಡದ ಕುರಿ ಸಂತೆಗೆ ಬಂದಾಗ ಅಲ್ಲಿ ಕದ್ದ ಆಡಿನೊಂದಿಗೆ ಬಾಲಕ ಸಿಕ್ಕುಬಿದ್ದಿದ್ದಾನೆ. ಈ ವೇಳೆ ಆತನೊಂದಿಗೆ ಇದ್ದ ಮಾವ ಪರಾರಿಯಾಗಿದ್ದಾನೆ. ಬಾಲಕನನ್ನು ಗ್ರಾಮಕ್ಕೆ ಕರೆದೊಯ್ದು ಊರ ಮಧ್ಯೆ ಗುಡಿಯ ಎದುರಿನ ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ ಎಂದು ಹೇಳಲಾಗಿದೆ.

ಬಾಲಕನನ್ನು ಹಿಡಿದು ತಂದು ಮರಕ್ಕೆ ಕಟ್ಟಿ ಹೊಡೆಯಲಾಗಿದೆ. ಘಟನೆಯ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಈ ಬಗ್ಗೆ ಇಳಕಲ್ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !