ಚರ್ಚೆಗೆ ಗ್ರಾಸವಾದ ಫೇಸ್‌ಬುಕ್ ಪೋಸ್ಟ್

7
ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ ಚಿತ್ರ ವೈರಲ್

ಚರ್ಚೆಗೆ ಗ್ರಾಸವಾದ ಫೇಸ್‌ಬುಕ್ ಪೋಸ್ಟ್

Published:
Updated:
Deccan Herald

ಬಾಗಲಕೋಟೆ: ಜಮಖಂಡಿ ಉಪಚುನಾವಣೆಯಲ್ಲಿ ಮತದಾರರೊಬ್ಬರು ವಿದ್ಯುನ್ಮಾನ ಮತ ಯಂತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡಗೆ ಹೆಸರಿನ ಮುಂದೆ ಗುಂಡಿ ಒತ್ತುವ ಚಿತ್ರ ಈಗ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ.

ಕರ್ನಾಟಕ ಕಾಂಗ್ರೆಸ್ ಹೆಸರಿನ ಫೇಸ್‌ಬುಕ್ ಪುಟದಲ್ಲಿ ಈ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ. ಆನಂದ ನ್ಯಾಮಗೌಡ ಹಾಗೂ ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿನ ಎದುರಿನ ಬಟನ್ ಒತ್ತಿದ್ದು, ಆಗ ಕೆಂಪು ದೀಪ ಹತ್ತಿರುವುದು ಚಿತ್ರದಲ್ಲಿ ಕಾಣುತ್ತಿದೆ. ಇದಕ್ಕೆ 311 ಮಂದಿ ಲೈಕ್ ಮಾಡಿದ್ದು, 16 ಮಂದಿ ಕಮೆಂಟ್ ಮಾಡಿದ್ದಾರೆ. ನಾಲ್ಕು ಮಂದಿ ಷೇರ್ ಮಾಡಿದ್ದಾರೆ.

ವಿಜಯಪುರದ ಕಾಂಗ್ರೆಸ್ ಬೆಂಬಲಿಗರ ಈ ಫೇಸ್‌ಬುಕ್‌ ಪುಟದಲ್ಲಿನ ಈ ಫೋಟೊ ಮೇಲೆ ಜೈ ಹೊ ಕಾಂಗ್ರೆಸ್ ಎಂದು ಬರೆಯಲಾಗಿದೆ. ಇವಿಎಂನಲ್ಲಿ ಮತ ಹಾಕುವುದು. ಚಿತ್ರ ತೆಗೆಯುವುದು ಹಾಗೂ ಮತಗಟ್ಟೆ ಬಳಿಗೆ ಮೊಬೈಲ್‌ಫೋನ್ ಕೊಂಡೊಯ್ಯುವುದಕ್ಕೆ ನಿಷೇಧವಿದ್ದರೂ ಫೇಸ್‌ಬುಕ್‌ನಲ್ಲಿ ಷೇರ್ ಆಗಿರುವ ಈ ಚಿತ್ರ ಚರ್ಚೆಗೆ ಗ್ರಾಸವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !