ಕೊಡಗಿನ ನೆರವಿಗೆ ‘ರಂಗ’ ಹಸ್ತ

7

ಕೊಡಗಿನ ನೆರವಿಗೆ ‘ರಂಗ’ ಹಸ್ತ

Published:
Updated:
Deccan Herald

ಹಸಿರಿನ ಗಣಿ, ಕಿತ್ತಳೆ ನಾಡು ಕೊಡಗು ಮಹಾಮಳೆಗೆ ತತ್ತರಗೊಂಡು, ನೋಡುನೋಡುತ್ತಲೇ ತಾಯಿಯಿಲ್ಲದ ಮಗುವಿನಂತೆ ಸೊರಗಿತು. ಒಂಟಿಯಾಗಿ ಮುಂದಿನ ಬದುಕ ನೆನೆದು ಬಿಕ್ಕಿತು. ಆಗ ಉಸಿರು ಬಿಗಿದಿಟ್ಟುಕೊಂಡು ಬದುಕುತ್ತಿರುವ ಜನರಿಗಾಗಿ ನಾಡಿನ ಮೂಲೆ ಮೂಲೆಯ ಜನರು, ಸಂಘ ಸಂಸ್ಥೆಗಳು ಸ್ಪಂದಿಸಿರುವುದು ಸಂತೋಷ. ಆದರೆ ಅಷ್ಟಕ್ಕೆ ಕೊಡಗಿನಲ್ಲಿ ಬೆಳಕು ಮೂಡಿತೇ? ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆಯೇ? ಅಲ್ಲಿನ ಹಿರಿಯರು, ಮಕ್ಕಳ ಮೊಗದಲ್ಲಿ ನಗು ಮೂಡಿದೆಯೇ? ಹಸಿರು ಹಸನುಗೊಂಡಿತೇ? ಇಲ್ಲ... ಕೊಡಗು ಇನ್ನು ಹಸಿರಾಗಿಲ್ಲ. ಎಷ್ಟೋ ಮಂದಿಯ ಬದುಕು ಗುಡಿಸಲಲ್ಲೇ, ದೀಪದ ಬೆಳಕಲ್ಲೇ ಸಾಗುತ್ತಿದೆ ಎನ್ನುವುದು ಸತ್ಯ..

ಇದೆಲ್ಲವನ್ನು ಕಾಣುತ್ತಾ, ಕೊಡಗಿನ ಜನರೊಂದಿಗೆ ಅಂದಿನಿಂದ ಇಂದಿನವರೆಗೂ ಇದ್ದು, ಬೇಕು ಬೇಡಗಳನ್ನು ವಿಚಾರಿಸುತ್ತಾ ಅವರ ನೋವುಗಳಿಗೆ ದನಿಯಾಗಿರುವ, ಸಹಾಯ ಹಸ್ತ ನೀಡುತ್ತಾ ಅಲ್ಲಿನ ಜನರಿಗೆ ತಾಯಿಯಂತೆ ಸೇವೆ ಸಲ್ಲಿಸುತ್ತಿರುವ ತಂಡವೇ ‘ಪೀಪಲ್ ಫಾರ್ ಪೀಪಲ್’.

ಕೊಡಗಿನ ಜನರ ಮಿಡಿತಕ್ಕಾಗಿಯೇ ಹುಟ್ಟಿದ ಈ ತಂಡ 25ಕ್ಕೂ ಹೆಚ್ಚು ದಿನಗಳು ಅಲ್ಲಿನ ನೆರೆ ಪೀಡಿತ ಪ್ರದೇಶಗಳಲ್ಲಿ ಶ್ರಮಿಸಿದೆ. ಇದೀಗ ಕೊಡಗಿನ ಮರುನಿರ್ಮಾಣಕ್ಕೆ ಪಣತೊಟ್ಟು ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಇದೇ 11ರಿಂದ 16ರವರೆಗೆ ಆರು ದಿನಗಳ ಕಾಲ ರಂಗ ಸಪ್ತಾಹ ಸಂಗೀತ ಜಾತ್ರೆ ಕಾರ್ಯಕ್ರಮ ಆಯೋಜಿಸಿದೆ. ಇವರ ಈ ಕಾರ್ಯಕ್ಕೆ ನಾಡಿನ ಅತ್ಯುತ್ತಮ ರಂಗತಂಡಗಳು ಕೈಜೋಡಿಸಿವೆ. ಜೊತೆಗೆ ಸಂಪೂರ್ಣ ವೈಜ್ಞಾನಿಕ ಮಾಹಿತಿಯುಳ್ಳ ಜಮ್ಮಾ ಭೂಮಿರ ಕಥೆ (The untold story of Western Ghats) ಸಾಕ್ಷ್ಯ ಚಿತ್ರ ಪ್ರದರ್ಶನವೂ ಇದೆ.

ಪೀಪಲ್ ಫಾರ್ ಪೀಪಲ್ ತಂಡದ ವಿಶೇಷತೆ: ಯಾವುದೇ ಸಂದರ್ಭಗಳಲ್ಲಿ ಮಾನವ ಸಂಕುಲ ಸಂಕಷ್ಟಕ್ಕೆ ಒಳಗಾದಾಗ ನಿಸ್ವಾರ್ಥ ಸೇವೆ ಸಲ್ಲಿಸಸುವುದು ಈ ತಂಡದ ಪ್ರಮುಖ ಉದ್ದೇಶ. ಕೊಡಗಿನ ನೆರೆ ಪ್ರದೇಶದ ಜನರ ಬದುಕನ್ನು ಹಸನುಗೊಳಿಸುವ ಉದ್ದೇಶಕ್ಕಾಗಿ ಹುಟ್ಟಿಕೊಂಡ ಈ ತಂಡದ ನಿರ್ದೇಶಕರು ಚಕ್ರವರ್ತಿ ಚಂದ್ರಚೂಡ್. ಇವರ ನೇತೃತ್ವದ ಈ ತಂಡ ಇದುವರೆಗೆ 43 ನಿರಾಶ್ರಿತರ ಕ್ಯಾಂಪ್‌ಗಳಲ್ಲಿ ಸೇವೆ ಸಲ್ಲಿಸಿದೆ.

ರಕ್ಷಣಾ ಕಾರ್ಯಗಳಲ್ಲಿ ಭಾಗಿಯಾಗಿದ್ದು, ನಿರಾಶ್ರಿತರಿಗೆ ತುರ್ತಾಗಿ ಅವಶ್ಯಕವಿದ್ದ ವೈದ್ಯಕೀಯ ಕಿಟ್‌, ಗ್ಯಾಸ್ ಗೀಸರ್, ಇ– ಟಾಯ್ಲೆಟ್ ಅಭಿಯಾನ ಕೈಗೊಂಡಿತ್ತು. ಮಕ್ಕಳಿಗೆ 1000ಕ್ಕೂ ಹೆಚ್ಚು ಹಾಸಿಗೆ ಸೌಲಭ್ಯ ಒದಗಿಸಿತ್ತು.  ಈ ತಂಡದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್, ಒರಟ ಪ್ರಶಾಂತ್, ಪಲ್ಲವಿ ಇಡೂರ್ ಸೇರಿದಂತೆ 50 ಮಂದಿ ಕಲಾವಿದರಿದ್ದಾರೆ. ಒಟ್ಟಿನಲ್ಲಿ ಸಮಸ್ಯೆಗೊಳಗಾದವರಿಗೆ ಸಾಮಾಜಿಕ, ಆರ್ಥಿಕವಾಗಿ, ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸುವುದು, ಸಂಕಷ್ಟದಲ್ಲಿರುವವರನ್ನು ಮುಖ್ಯವಾಹಿನಿಗೆ ತರುವುದು, ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು... ಹೀಗೆ ಹತ್ತು ಹಲವಾರು ಗುರಿಗಳನ್ನಿಟ್ಟುಕೊಂಡು ಈ ತಂಡ ಸಾಗುತ್ತಿದೆ.

**

ಮಾಹಿತಿಗೆ: ಚಕ್ರವರ್ತಿ ಚಂದ್ರಚೂಡ್-9008033336, ಸಂತೋಷ್ ಕೊಡಂಚಿಕೇರಿ-9900077712, ಗೋರವಿ ಆಲ್ದೂರ್-9900008002, ವಿಶ್ವಾಸ್ ಭಾರದ್ವಾಜ್-8951299534

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !