ನಾನು ಆಯ್ಕೆಯ ಸ್ವಾತಂತ್ರ್ಯದ ಪರವಾಗಿದ್ದೇನೆ: ವಿರಾಟ್

7

ನಾನು ಆಯ್ಕೆಯ ಸ್ವಾತಂತ್ರ್ಯದ ಪರವಾಗಿದ್ದೇನೆ: ವಿರಾಟ್

Published:
Updated:
Deccan Herald

ಬೆಂಗಳೂರು: ಬುಧವಾರ ಸಂಜೆ ತಮ್ಮ ಹೇಳಿಕೆಯಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳಿಗೆ ಒಳಗಾಗಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಶುಕ್ರವಾರ ಸಂಜೆ ಪ್ರತಿಕ್ರಿಯಿಸಿದ್ದಾರೆ.

‘ನಾನು  ಆಯ್ಕೆ ಸ್ವಾತಂತ್ರ್ಯದ ಪರವಾಗಿದ್ದೇನೆ. ಇದನ್ನೆಲ್ಲ ಹಗುರವಾಗಿ ತೆಗೆದುಕೊಳ್ಳಿ ಗೆಳೆಯರೇ. ‘ಈ ಭಾರತೀಯರು’ ಹೇಗೆಲ್ಲ ಟ್ರೋಲ್ ಮಾಡುತ್ತಾರೆ ಎಂಬುದನ್ನು ತೋರಿಸಿದ್ದೇನಷ್ಟೇ. ದೀಪಾವಳಿಯ ಸಂಭ್ರಮವನ್ನು ಮನಪೂರ್ವಕವಾಗಿ ಆನಂದಿಸಿ’ ಎಂದು ಟ್ವೀಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಅವರ ಜನ್ಮದಿನದ ಅಂಗವಾಗಿ ಬಿಡುಗಡೆಯಾಗಿದ್ದ ನೂತನ ಆ್ಯಪ್‌ನಲ್ಲಿ ಅಭಿಮಾನಿಯೊಬ್ಬರು, ‘‘ವಿರಾಟ್‌ ಕೊಹ್ಲಿ ಅತಿಯಾಗಿ ಗೌರವಿಸಲಾಗುತ್ತಿರುವ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಆದರೆ ಅವರ ಬ್ಯಾಟಿಂಗ್‌ನಲ್ಲಿ ಅಂತಹ ವಿಶೇಷತೆಯೇನೂ ಇಲ್ಲ. ಭಾರತೀಯ ಬ್ಯಾಟ್ಸ್‌ಮನ್‌ಗಳಿಗಿಂತಲೂ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕ್ರಿಕೆಟಿಗರ ಬ್ಯಾಟಿಂಗ್ ಇಷ್ಟಪಡುತ್ತೇನೆ’ ಎಂದು ಬರೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಕೊಹ್ಲಿ, ‘ಓಕೆ, ನನ್ನ ಪ್ರಕಾರ ನೀನು ಭಾರತದಲ್ಲಿ ವಾಸ ಮಾಡಬಾರದು, ಬೇರೆ ದೇಶಗಳಲ್ಲಿ ವಾಸಿಸ ಬಹುದು, ಬೇರೆ ದೇಶಗಳನ್ನು ಇಷ್ಟಪಡುವ ನೀನು ಭಾರತದಲ್ಲಿ ಯಾಕೆ ವಾಸ ಮಾಡುತ್ತೀಯಾ? ನೀನು ನನ್ನನ್ನು ಇಷ್ಟಪಡದಿದ್ದರೆ ಪರವಾಗಿಲ್ಲ, ನೀನು ಭಾರತದಲ್ಲೇ ಇರಬೇಕು ಎಂದು ನಾನು ಸಹ ಯೋಚಿಸುವುದಿಲ್ಲ?’ ಎಂದಿದ್ದರು.

ಇದು ಹಲವು ಕ್ರಿಕೆಟ್‌ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಹಲವರು ಟೀಕೆಗಳ ಮಳೆಯನ್ನೇ ಸುರಿಸಿದ್ದರು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !