ಟಿಪ್ಪು ಜಯಂತಿ ಆಚರಣೆಗೆ ವಿರೋಧ

7

ಟಿಪ್ಪು ಜಯಂತಿ ಆಚರಣೆಗೆ ವಿರೋಧ

Published:
Updated:
Deccan Herald

ಬಾಗಲಕೋಟೆ: ರಾಜ್ಯ ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಟಿಪ್ಪು ಜಯಂತಿ ಆಚರಣೆ ವಿರೋಧಿ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಹಾಗೂ ಬಜರಂಗದಳದ ಮುಖಂಡರು ಪಾಲ್ಗೊಂಡಿದ್ದರು.

‘ವಿವಾದಾತ್ಮಕ ವ್ಯಕ್ತಿ ಟಿಪ್ಪುವಿನ ಜಯಂತಿ ಆಚರಿಸುವ ಮೂಲಕ ಸರ್ಕಾರ ರಾಜ್ಯಾದ್ಯಂತ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿದೆ. ಟಿಪ್ಪು ಆಳ್ವಿಕೆಯ ಕಾಲದಲ್ಲಿ ಕೊಡಗು, ಮೈಸೂರು, ಚಿತ್ರದುರ್ಗ, ಮಂಗಳೂರಿನಲ್ಲಿ ಮತಾಂಧತೆಯಿಂದ ಹಿಂದೂಗಳ ಕಗ್ಗೊಲೆ ಮಾಡಲಾಗಿದೆ. ಸಾವಿರಾರು ಮಂದಿಯ ಮತಾಂತರವೂ ನಡೆದಿದೆ. ಈ ಬಗ್ಗೆ ಅನೇಕ ದಾಖಲೆಗಳು ಲಭ್ಯವಿದ್ದು, ಹಿರಿಯ ಸಂಶೋಧಕರು, ಇತಿಹಾಸ ತಜ್ಞರು ಇದರ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಹಾಗಾಗಿ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿದ ವ್ಯಕ್ತಿಯ ಜಯಂತಿ ಆಚರಣೆ ಸಲ್ಲ’ ಎಂದರು.

‘ಮತಬ್ಯಾಂಕ್‌ಗಾಗಿ ಚುನಾಯಿತ ಸರ್ಕಾರವೊಂದು ಟಿಪ್ಪು ಜಯಂತಿ ಆಚರಣೆ ನೆಪದಲ್ಲಿ ಸಮುದಾಯವೊಂದರ ಓಲೈಕೆಗೆ ಇಳಿದಿರುವುದು ಸರಿಯಲ್ಲ. ಸಂತ ಶಿಶುನಾಳ ಶರೀಫ, ಸಂತ ಕಬೀರ, ಡಾ.ಎ.ಪಿ.ಜೆ. ಅಬ್ದುಲ್ ಕಲಾಂರಂತಹ ಮಹನೀಯರ ಜಯಂತಿಯನ್ನು ಆಚರಿಸಲಿ. ಅದು ಬಿಟ್ಟು ಕನ್ನಡ ವಿರೋಧಿ, ಮತಾಂಧ ವ್ಯಕ್ತಿಯ ಜಯಂತಿ ಆಚರಿಸಿ ಶಾಂತಿ ಕದಡಲು ಸರ್ಕಾರವೇ ಪ್ರಚೋದನೆ ಕೊಡುವುದು ಬೇಡ’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಟಿಪ್ಪು ಜಯಂತಿ ಆಚರಣೆ ವಿರೋಧಿ ಸಮಿತಿ ಅಧ್ಯಕ್ಷ ಯಲ್ಲಪ್ಪ ಭಜಂತ್ರಿ, ಬಿಜೆಪಿ ಮುಖಂಡರಾದ ರಾಜು ರೇವಣಕರ, ಯಲ್ಲಪ್ಪ ಬೆಂಡಿಗೇರಿ, ಬಸವರಾಜ ಯಂಕಂಚಿ, ಗಿರಿಯಪ್ಪ ಭಜಂತ್ರಿ, ಸುರೇಶ ಮಜ್ಜಿಗಿ, ಬಜರಂಗದಳದ ಮುಖಂಡ ಶಿವುಮೇಲ್ನಾಡ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !