ಆಸ್ಟ್ರೇಲಿಯಾ ಓಪನ್ ಟಿಟಿ: ಪ್ರೀಕ್ವಾರ್ಟರ್‌ಗೆ ಸತ್ಯನ್

7

ಆಸ್ಟ್ರೇಲಿಯಾ ಓಪನ್ ಟಿಟಿ: ಪ್ರೀಕ್ವಾರ್ಟರ್‌ಗೆ ಸತ್ಯನ್

Published:
Updated:
Deccan Herald

ನವದೆಹಲಿ: ಭಾರತದ ಜಿ. ಸತ್ಯನ್ ಲಿಂಜ್‌ನಲ್ಲಿ ನಡೆಯುತ್ತಿರುವ ಐಟಿಟಿಎಫ್‌ ಆಸ್ಟ್ರೇಲಿಯಾ ಓಪನ್ ಟೇಬಲ್ ಟೆನಿಸ್ ಟೂರ್ನಿಯ ಪ್ರೀ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ  ಮುಖ್ಯ ಸುತ್ತಿನ ಪಂದ್ಯದಲ್ಲಿ ಸತ್ಯನ್ 4–11, 11–9, 11–9ರಿಂದ 16ನೇ ಶ್ರೇಯಾಂಕದ ಆಟಗಾರ, ಪೋರ್ಚುಗಲ್‌ನ ಮಾರ್ಕೋಸ್ ಫ್ರೀಟಸ್ ವಿರುದ್ಧ ಜಯಿಸಿದರು.

35ನೇ ಶ್ರೇಯಾಂಕದ ಸತ್ಯನ್ ಅವರು ಮೊದಲ ಗೇಮ್‌ನಲ್ಲಿ ಸುಲಭವಾಗಿ ಸೋತರು. ಅವರು ಈ ಗೇಮ್‌ನಲ್ಲಿ ಕೇವಲ ನಾಲ್ಕು ಪಾಯಿಂಟ್ ಗಳಿಸಲಷ್ಟೇ ಶಕ್ತರಾದರು. ವೇಗದ ಆಟವಾಡಿದ ಫ್ರೀಟಸ್ ಅವರ ಆಟಕ್ಕೆ ಸತ್ಯನ್ ಸಾಟಿಯಾಗಲಿಲ್ಲ.

ಆದರೆ ಎರಡನೇ ಗೇಮ್‌ನಲ್ಲಿ ಅಚ್ಚರಿಯ ರೀತಿಯಲ್ಲಿ ತಿರುಗೇಟು ನೀಡಿದ ಸತ್ಯನ್ ತಮ್ಮ ಮಣಿಕಟ್ಟಿನ ಚಲನೆಯ ಆಟದಿಂದ ಗೆದ್ದರು. ಟಾಪ್‌ಸ್ಪಿನ್ ಮತ್ತು ಚುರುಕಿನ ರಿಟರ್ನ್‌ಗಳ ಮೂಲಕ ಫ್ರೀಟಸ್ ಅವರನ್ನು ಕಂಗೆಡಿಸಿದರು. ಇದರಿಂದ ಏಕಾಗ್ರತೆ ಕಳೆದುಕೊಂಡ ಫ್ರೀಟಸ್ ಹಲವು ತಪ್ಪುಗಳನ್ನು ಮಾಡಿದರು.

ಮೂರನೇ ಗೇಮ್‌ ರೋಚಕತೆಯಿಂದ ಕೂಡಿತ್ತು. ಬಹುತೇಕ ಭಾಗವು ಸಮಬಲದ ಹೋರಾಟಕ್ಕೆ ಸಾಕ್ಷಿಯಾಯಿತು. ಆದರೂ ಸತ್ಯನ್ ಅವರ ಕಲಾತ್ಮಕ ಆಟವೇ ಮೇಲುಗೈ ಸಾಧಿಸಿತು.

‘ಈ ಜಯವು ನನಗೆ ಅವಿಸ್ಮರಣೀಯವಾದದ್ದು. ನನ್ನ ಆಟದ ರೀತಿಯು ತೃಪ್ತಿಕರವಾಗಿದೆ. ಇದೇರೀತಿ ಮುಂದಿನ ಪಂದ್ಯದಲ್ಲಿಯೂ ಆಡುತ್ತೇನೆ’ ಎಂದು ಸತ್ಯನ್ ವಿಶ್ವಾಸ ವ್ಯಕ್ತಪಡಿಸಿದರು.

16ರ ಘಟ್ಟದಲ್ಲಿ ಅವರು  ಚೀನಾದ ಆಟಗಾರ, ವಿಶ್ವದ ಎರಡನೇ ಶ್ರೇಯಾಂಕಿತ ಸು ಸಿನ್ ಅವರನ್ನು ಎದುರಿಸುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !