ದೇವರ ಹಿಪ್ಪರಗಿಯಲ್ಲಿ ‘ಅಂಬೇಡ್ಕರ್‌ ವೃತ್ತ’

7

ದೇವರ ಹಿಪ್ಪರಗಿಯಲ್ಲಿ ‘ಅಂಬೇಡ್ಕರ್‌ ವೃತ್ತ’

Published:
Updated:
Deccan Herald

ದೇವರ ಹಿಪ್ಪರಗಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಗೌರವಾರ್ಥ, ಸ್ಮರಣಾರ್ಥ ಬಹುತೇಕ ಪಟ್ಟಣ, ನಗರ, ಗ್ರಾಮಗಳಲ್ಲೂ ಪ್ರತಿಮೆ ಸ್ಥಾಪಿಸಿ, ವೃತ್ತ ನಿರ್ಮಿಸಲಾಗಿದೆ. ಇದಕ್ಕೆ ಪಟ್ಟಣವೂ ಹೊರತಾಗಿಲ್ಲ.

ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 218ಕ್ಕೆ ಇಂಡಿ ರಸ್ತೆ, ಹಾಗೂ ಲಂಬಾಣಿ ತಾಂಡಾ ರಸ್ತೆ ಸೇರುವ ಪ್ರಮುಖ ಸ್ಥಳದಲ್ಲಿ, ಧ್ವಜ ಸ್ತಂಭದ ಸಾಮಾನ್ಯ ವೃತ್ತಾಕಾರದ ಕಟ್ಟೆ ಕಟ್ಟಿ, ವೃತ್ತ ನಿರ್ಮಿಸಲಾಗಿದೆ.

‘2016ರಲ್ಲಿ ಈ ವೃತ್ತ ನಿರ್ಮಾಣದ ನಿರ್ಧಾರ ಕೈಗೊಳ್ಳಲಾಯಿತು. ಒಂದೂವರೆ ವರ್ಷ ಕಾಮಗಾರಿ ನಡೆಯಿತು. ₹ 40 ಲಕ್ಷ ವೆಚ್ಚದಲ್ಲಿ ಏಳು ಅಡಿ ಎತ್ತರದ ಪಂಚಲೋಹದ ಅಂಬೇಡ್ಕರ್‌ ಮೂರ್ತಿ ನಾಗ್ಪುರದಲ್ಲಿ ಸಿದ್ಧಗೊಳ್ಳುತ್ತಿದ್ದಂತೆ; 2017ರ ಡಿ.8ರಂದು ವೃತ್ತ, ಪ್ರತಿಮೆಯನ್ನು ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಿದರು’ ಎಂದು ವೃತ್ತದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಂಬೇಡ್ಕರ್ ದಲಿತ ಸಮಾಜ ಸುಧಾರಣಾ ಸಮಿತಿಯ ಅಧ್ಯಕ್ಷ ಕಾಶೀನಾಥ ತಳಕೇರಿ, ಉಪಾಧ್ಯಕ್ಷ ರಮೇಶ ಮ್ಯಾಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿಮೆ, ವೃತ್ತ ನಿರ್ಮಾಣಕ್ಕೆ ಕೇಂದ್ರ ಸಚಿವ ರಮೇಶ ಜಿಗಜಿಣಗಿ ತಮ್ಮ ಸಂಸದರ ನಿಧಿಯಿಂದ ₹ 2.5 ಲಕ್ಷ ನೀಡಿದ್ದಾರೆ. ಇದೀಗ ವೃತ್ತ ಸಂಪೂರ್ಣ ಹಸಿರುಮಯ. ನಿತ್ಯವೂ ತುಂತುರು ನೀರಾವರಿ ಮೂಲಕ ಹಸಿರಿಗೆ ನೀರುಣಿಸಲಾಗುತ್ತಿದೆ.

ವೃತ್ತದ ಸೌಂದರ್ಯ ಹೆಚ್ಚಿಸಲು ಬಣ್ಣದ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಹೈಮಾಸ್ಟ್‌ ದೀಪ ಅಳವಡಿಸಿರುವುದರಿಂದ ರಾತ್ರಿ ವೇಳೆ ಕಂಗೊಳಿಸುತ್ತದೆ. ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಅನುಕೂಲವಾಗುವಂತೆ ಅಟ್ಟಣಿಗೆ ಸಹ ನಿರ್ಮಿಸಲಾಗಿದೆ’ ಎನ್ನುತ್ತಾರೆ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಭಾಸ್ಕರ ಗುಡಿಮನಿ, ಮುಖಂಡರಾದ ಸಿದ್ದು ಮೇಲಿನಮನಿ, ಸೋಮಶೇಖರ ಮಲ್ಲಾರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !