ಸುಲಿಗೆ ಪ್ರಕರಣ: ಇಬ್ಬರ ಬಂಧನ

7

ಸುಲಿಗೆ ಪ್ರಕರಣ: ಇಬ್ಬರ ಬಂಧನ

Published:
Updated:
Deccan Herald

ಮಂಗಳೂರು: ಜೋಕಟ್ಟೆ ರೈಲ್ವೆ ಹಳಿ ಬಳಿ ಶುಕ್ರವಾರ ರಾತ್ರಿ ನಡೆದು ಹೋಗುತ್ತಿದ್ದ ಫಝಲ್‌ ಖಾನ್‌ ಎಂಬುವವರನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಆರೋಪದ ಮೇಲೆ ಕಸಬಾ ಬೆಂಗರೆಯ ಇಬ್ಬರನ್ನು ಪಣಂಬೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಸಬಾ ಬೆಂಗರೆ ನಿವಾಸಿಗಳಾದ ನೌಶಾದ್‌ ಅಲಿಯಾಸ್‌ ನೌಶಾದ್ ಆದಂ ಅಲಿಯಾಸ್‌ ನೌಶು ಅಲಿಯಾಸ್‌ ಬುಲೆಟ್‌ (25) ಮತ್ತು ಮಹಮ್ಮದ್ ನೌಫಾಲ್ ಅಲಿಯಾಸ್‌ ನೌಫಾಲ್‌ ಅಲಿಯಾಸ್ ನೌಫಾ (31) ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಭಾಗಿಯಾಗಿದ್ದ ಅಜರ್‌ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗ ನಡೆದು ಹೋಗುತ್ತಿದ್ದ ಫಝಲ್‌ ಖಾನ್‌ ಅವರನ್ನು ಜೋಕಟ್ಟೆ ರೈಲ್ವೆ ಹಳಿ ಬಳಿ ಆರೋಪಿಗಳು ಅಡ್ಡಗಟ್ಟಿದ್ದರು. ಚೂರಿ ತೋರಿಸಿ ಬೆದರಿಸಿ ₹ 10,000 ನಗದು ಮತ್ತು ಎರಡು ಮೊಬೈಲ್‌ ಫೋನ್‌ಗಳನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಫಝಲ್‌ ಪಣಂಬೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಪಣಂಬೂರು ಠಾಣೆ ಇನ್‌ಸ್ಪೆಕ್ಟರ್ ಕೆ.ಎಂ.ರಫೀಕ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಮಂಗಳೂರು ಉತ್ತರ ರೌಡಿ ನಿಗ್ರಹ ದಳ ಹಾಗೂ ಪಣಂಬೂರು ಠಾಣೆ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. ಅವರಿಂದ ₹ 1,500 ನಗದು, ಮೂರು ಮೊಬೈಲ್‌ ಫೋನ್‌, ಒಂದು ದ್ವಿಚಕ್ರ ವಾಹನ ಮತ್ತು ಕೃತ್ಯಕ್ಕೆ ಬಳಸಿದ್ದ ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !