ಕೇಂದ್ರ ಸಚಿವ ಅನಂತಕುಮಾರ್‌ ನಿಧನ: ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಬರಹ

7
ಮಂಗಳೂರು ಮುಸ್ಲಿಮ್ಸ್‌ ಪೇಜ್‌ನಲ್ಲಿ ನಿಂದನೆ

ಕೇಂದ್ರ ಸಚಿವ ಅನಂತಕುಮಾರ್‌ ನಿಧನ: ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಬರಹ

Published:
Updated:

ಮಂಗಳೂರು: ನಿಧನರಾಗಿರುವ ಕೇಂದ್ರ ಸಚಿವ ಅನಂತಕುಮಾರ್‌ ಕುರಿತು ‘Mangalore Muslims' ಎಂಬ ಫೇಸ್‌ಬುಕ್‌ ಪುಟದಲ್ಲಿ ಅವಹೇಳನಕಾರಿ ಬರಹವೊಂದನ್ನು ಪ್ರಕಟಿಸಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

‘ಜಾತಿ ರಾಜಕಾರಣ ಕುತಂತ್ರಿ ಬ್ರಾಹ್ಮಣ ಅನಂತ್‌ ಕುಮಾರ್‌ ಮೇಲೆ ಹೋಗಿಯೂ ಜಾತಿ ವಿಷ ಬಿತ್ತಬೇಡ’ ಎಂಬ ತಲೆಬರಹದೊಂದಿಗೆ ‘ಜಾತಿ ಜಾತಿ ರಾಮ ರಾಮ ಅನ್ನುತ್ತಲೇ ಹೊಗೆ ಹಾಕಿಕೊಂಡ ಕೋಮುವಾದಿ ಅನಂತ್ ಕುಮಾರ್‌ ದೇಶ ಹಾಳು ಮಾಡಲು ಇನ್ನೊಮ್ಮೆ ಹುಟ್ಟಿ ಬರಬೇಡ’ ಎಂದು ಉಲ್ಲೇಖಿಸಿ ಸಚಿವರ ಫೋಟೊ ಹಾಕಲಾಗಿದೆ.

ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಹಾಕಿರುವ ಈ ಪೋಸ್ಟ್‌ ಅನ್ನು 93 ಮಂದಿ ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. 741 ಮಂದಿ ಪ್ರತಿಕ್ರಿಯೆ ದಾಖಲಿಸಿದ್ದು, ಪರ–ವಿರೋಧ ವಾಕ್ಸಮರ ನಡೆಯುತ್ತಿದೆ. 255 ಮಂದಿ ಲೈಕ್‌ ಒತ್ತಿದ್ದಾರೆ.

ಹಿಂದೆಯೂ ಹಲವು ಬಾರಿ ಅವಹೇಳನಕಾರಿ ಬರಹಗಳು, ಕೋಮು ದ್ವೇಷ ಬಿತ್ತುವ ಪೋಸ್ಟ್‌ಗಳನ್ನು ಪ್ರಕಟಿಸಿ ಈ ಪೇಜ್‌ ವಿವಾದ ಸೃಷ್ಟಿಸಿತ್ತು. ಈಗ ಅನಂತಕುಮಾರ್‌ ಅವರ ಕುರಿತು ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ‘ಮಂಗಳೂರು ಮುಸ್ಲಿಮ್ಸ್’ ಪುಟದ ಅಡ್ಮಿನ್‌ ಅನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 2

  Sad
 • 1

  Frustrated
 • 32

  Angry

Comments:

0 comments

Write the first review for this !