ಅನಂತಕುಮಾರ್ ಅಗಲಿಕೆ ತುಂಬಲಾರದ ನಷ್ಟ

7
ನಗರದ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನದ ಪ್ರಯುಕ್ತ ಶ್ರದ್ಧಾಂಜಲಿ ಸಭೆ ಆಯೋಜನೆ

ಅನಂತಕುಮಾರ್ ಅಗಲಿಕೆ ತುಂಬಲಾರದ ನಷ್ಟ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಕೇಂದ್ರ ಸಚಿವ ಅನಂತಕುಮಾರ್ ಅವರ ಅಕಾಲಿಕ ಅಗಲಿಕೆ ರಾಷ್ಟ್ರಕ್ಕೆ ಮತ್ತು ವಿಶೇಷವಾಗಿ ರಾಜ್ಯಕ್ಕೆ ತುಂಬಲಾರದ ನಷ್ಟ’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಅನಂತಕುಮಾರ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದ ಅನಂತಕುಮಾರ್ ಅವರು ಸದಾಕಾಲ ಅವರು ಕ್ರಿಯಾಶೀಲವಾಗಿ ಯೋಚನೆ ಮಾಡುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಬೆಕಾದರೆ ನಾವು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು. ಈ ಭಾಗದಲ್ಲಿ ಪಕ್ಷವನ್ನು ಪ್ರಬಲವಾಗಿ ಕಟ್ಟಬೇಕು’ ಎಂದು ಹೇಳಿದರು.

‘ ಓದಿನ ದಿನಗಳಲ್ಲಿ ಅನಂತಕುಮಾರ್ ಅವರು ಎಬಿವಿಪಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಿದ್ದರು. ಉನ್ನತ ಸ್ಥಾನಗಳನ್ನು ಅಲಂಕರಿಸಿದರೂ ಪಕ್ಷದ ಕಾರ್ಯಕ್ರಮಕ್ಕೆ ಬಂದಾಗ ಸಾಮಾನ್ಯ ಕಾರ್ಯಕರ್ತರೊಂದಿಗೆ ಕುಳಿತು ಊಟ ಮಾಡಿ, ಸಾಮಾನ್ಯರೊಂದಿಗೆ ಮಲಗಿಕೊಳ್ಳುವಷ್ಟರ ಮಟ್ಟಿಗಿನ ಸರಳ ಜೀವಿಯಾಗಿದ್ದರು’ ಎಂದು ತಿಳಿಸಿದರು.

‘ಸಂಘಟನಾ ಚತುರತೆ ಹೊಂದಿದ್ದ ಅವರು ರಾಜ್ಯದಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆಸಿದ್ದರು. ಅವರು ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ವೇಳೆ ರಾಜ್ಯದಲ್ಲಿ ಬಿಜೆಪಿ 79 ಸ್ಥಾನಗಳಲ್ಲಿ ಗೆದ್ದು ಮೊದಲ ಬಾರಿಗೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ರಸಗೊಬ್ಬರ ಬೆಲೆ ಹೆಚ್ಚಾದಾಗ ರೈತರ ಪರವಾಗಿ ನಾನಿದ್ದೇನೆ ಎಂದು ಹೇಳುವ ಜತೆಗೆ ಬೆಲೆ ಕಡಿಮೆ ಮಾಡಿಸಿದ್ದರು. ಬಿಹಾರದಲ್ಲಿ 2 ಲಕ್ಷ ಬಡ ಮಕ್ಕಳಿಗೆ ನಿತ್ಯ ಉಚಿತವಾಗಿ ಊಟ ಒದಗಿಸುವ ದೊಡ್ಡ ಸಾಮಾಜಿಕ ಕಳಕಳಿ ಕೆಲಸ ಮಾಡುತ್ತಿದ್ದರು’ ಎಂದರು.

‘ಅನಂತಕುಮಾರ್ ಅವರು ಯಾವುದೇ ಖಾತೆ ಕೊಟ್ಟರೂ ಅದನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದರು. ಅವರು ಎಂದೂ ಯಾವ ರಾಜಕಾಣಿಯ ಬಗ್ಗೆ ವೈಯಕ್ತಿಕ ಟೀಕೆ ಮಾಡಿದವರಲ್ಲ. ಪ್ರತಿಯೊಬ್ಬ ಕಾರ್ಯಕರ್ತರನ್ನು ಗುರುತಿಸಿ ಮಾತನಾಡಿಸುತ್ತಿದ್ದರು. ಚಾಣಾಕ್ಷ ಮತ್ತು ದೂರ ದೃಷ್ಟಿಯುಳ್ಳ ನಾಯಕ ನಿಧನದಿಂದಾಗಿ ಪಕ್ಷಕ್ಷೆ ಭಾರಿ ನಷ್ಟವಾಗಿದೆ’ ಎಂದು ವಿಷಾದಿಸಿದರು.

‘ರಾಜಕಾರಣದಲ್ಲಿ ಅನೇಕ ಸಲ ನೋವು ಅನುಭವಿಸಿದರೂ ಅವುಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಛಲದಿಂದ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಅವರನ್ನು ಕಳೆದುಕೊಂಡು ಪಕ್ಷ ಬಡವಾಗಿದೆ’ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಬೈರೇಗೌಡ, ಶ್ರೀಕಾಂತ್ ಭಟ್, ರಾಮಣ್ಣ, ರಾಜೇಶ್, ಕೃಷ್ಣಮೂರ್ತಿ, ಕೃಷ್ಣಾರೆಡ್ಡಿ, ಅರುಣ್, ಕಿರಣ್, ಮಧುಚಂದ್ರ, ಸುರೇಶ್, ಶಶಿಕುಮಾರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !