ಭಿನ್ನ ವಿಚಾರಧಾರೆ ಗೌರವಿಸುತ್ತಿದ್ದ ನಾಯಕ: 80ರ ದಶಕದಿಂದ ಬಾಗಲಕೋಟೆ ನಂಟು

7
ಸೈಕಲ್‌ನಲ್ಲಿ ಸುತ್ತಿ ಎಬಿವಿಪಿ ಸಂಘಟನೆ

ಭಿನ್ನ ವಿಚಾರಧಾರೆ ಗೌರವಿಸುತ್ತಿದ್ದ ನಾಯಕ: 80ರ ದಶಕದಿಂದ ಬಾಗಲಕೋಟೆ ನಂಟು

Published:
Updated:
Deccan Herald

ಬಾಗಲಕೋಟೆ: 80ರ ದಶಕದ ಆರಂಭದಿಂದಲೂ ಎಬಿವಿಪಿ ಸಂಘಟನೆ ಮೂಲಕ ಬಾಗಲಕೋಟೆಯೊಂದಿಗೆ ಅನಂತಕುಮಾರ್ ನಂಟು ಹೊಂದಿದ್ದರು.

ಇಲ್ಲಿನ ಶಾರದಾ ಪ್ರೆಸ್‌ನ (ಎಬಿವಿಪಿ ಹಳೆಯ ಕಚೇರಿ) ಬಳಿಯ ಬುರ್ಲಿ ಚಹಾದಂಗಡಿ ಎದುರು ಸೈಕಲ್‌ ನಿಲ್ಲಿಸಿಕೊಂಡು ಚಹಾ ಕುಡಿಯುತ್ತಾ ಹರಟುತ್ತಿದ್ದ ಹಿರಿಯ– ಕಿರಿಯ ಗೆಳೆಯರ ಗುಂಪನ್ನು (ಅರವಿಂದ ಲಿಂಬಾವಳಿ, ರಾಜಶೇಖರ ಶೀಲವಂತರ, ನಾರಾಯಣ ಸಾ ಭಾಂಡಗೆ, ಪಿ.ಎಚ್.ಪೂಜಾರ, ವೀರಣ್ಣ ಚರಂತಿಮಠ) ವಿಧಾನಸೌಧದ ಪಡಸಾಲೆಗೆ ಕರೆದೊಯ್ದ ಶ್ರೇಯ ಅವರಿಗೆ ಸಲ್ಲುತ್ತದೆ. ದಿಢೀರನೆ ‘ಅನಂತ’ ನಿರ್ಗಮನ ಬೆಂಬಲಿಗರಲ್ಲಿ ಶೂನ್ಯ ಭಾವ ಸೃಷ್ಟಿಸಿದೆ.

‘1981ರಿಂದ 86ರವರೆಗೆ ಅನಂತಕುಮಾರ್ ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ರಾಜ್ಯ ಕಾರ್ಯದರ್ಶಿಯಾಗಿದ್ದರು. ವಾರಕ್ಕೊಮ್ಮೆ ಬಾಗಲಕೋಟೆಗೆ ಬರುತ್ತಿದ್ದರು. ಹುಬ್ಬಳ್ಳಿ ಹುಟ್ಟೂರಾದರೂ, ಬಾಗಲಕೋಟೆ ಅವರಿಗೆ ಕರ್ಮಭೂಮಿ’ ಎಂದು ಸಂಘಟನೆಯಲ್ಲಿ ಅವರ ಒಡನಾಡಿ ರಾಮ ಮನಗೂಳಿ ಸ್ಮರಿಸುತ್ತಾರೆ.

‘ಇಲ್ಲಿನ ವಲ್ಲಭಬಾಯಿ ಚೌಕದ ತಾರಾನಾಥ ಶಿಂಥ್ರೆ ಅವರ ಬಲರಾಮ ಸೈಕಲ್ ಸ್ಟೋರ್‌ನಲ್ಲಿ ಬಾಡಿಗೆ ಪಡೆದ ಸೈಕಲ್‌ನಲ್ಲಿ ಊರೂರು ಸುತ್ತಿ ಸಂಘಟನೆ ಮಾಡುತ್ತಿದ್ದರು. ಗಂಟೆಗೆ 15 ಪೈಸೆ ಬಾಡಿಗೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಾಗಲಕೋಟೆ ಶಾಖೆಯ ಹೆಸರಲ್ಲಿ ಸೈಕಲ್‌ ಬಾಡಿಗೆಯ ಲೆಕ್ಕದ ಖಾತೆ ನಿರ್ವಹಣೆಯಾಗುತ್ತಿತ್ತು. ವಾರಕ್ಕೊಮ್ಮೆ ಹಣ ತುಂಬಲಾಗುತ್ತಿತ್ತು’ ಎನ್ನುತ್ತಾರೆ.

ವಿಶೇಷವೆಂದರೆ 1988ರ ಜುಲೈ 5ರಂದು ಬಿಜೆಪಿ ರಾಜ್ಯ ಯುವ ಮೋರ್ಚಾಗೆ ಅನಂತಕುಮಾರ್ ನೇಮಕಗೊಂಡರು. ವಿದ್ಯಾರ್ಥಿ ಸಂಘಟನೆಯಿಂದ ರಾಜಕೀಯ ಬದುಕಿಗೆ ಕಾಲಿಟ್ಟ ಅವರಿಗೆ ಬಾಗಲಕೋಟೆಯ ಬಸವೇಶ್ವರ ವಿಜ್ಞಾನ ಕಾಲೇಜಿನಲ್ಲಿ ನಡೆದ ಎಬಿವಿಪಿ ಪ್ರಾಂತ ಅಭ್ಯಾಸ ವರ್ಗದಲ್ಲಿಯೇ ಬೀಳ್ಕೊಡುಗೆ ನೀಡಲಾಗಿತ್ತು.

‘ಭಿನ್ನ ವಿಚಾರಧಾರೆಯವರನ್ನು ಗೌರವಿಸುವ ಮನಸ್ಥಿತಿ ಅನಂತಕುಮಾರ್‌ ಅವರಿಗಿತ್ತು. 1984ರಲ್ಲಿ ಇಂದಿರಾಗಾಂಧಿ ಹತ್ಯೆಯಾದಾಗ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಹಮ್ಮಿಕೊಳ್ಳಲಾಗಿತ್ತು. ಆಗ ಎಚ್‌.ಕೆ.ಪಾಟೀಲರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಬೃಹತ್ ಕಾರ್ಯಕ್ರಮದ ಯಶಸ್ಸಿಗೆ ದುಡಿದಿದ್ದರು’ ಎಂದು ಇಲ್ಲಿನ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಉ‍ಪನ್ಯಾಸಕ ಡಾ.ಶ್ರೀನಿವಾಸ ಬಳ್ಳಿ ಹೇಳುತ್ತಾರೆ.

‘ಅನಂತಕುಮಾರ ಅವರ ಈ ಗುಣವೇ ಜನತಾ ಪರಿವಾರದ ರಮೇಶ ಜಿಗಜಿಣಗಿ, ಕೆ.ಬಿ.ಶಾಣಪ್ಪ, ಗೋವಿಂದ ಕಾರಜೋಳ ಅವರನ್ನು ಬಿಜೆಪಿಗೆ ಸೆಳೆಯಿತು. ಇದರಿಂದಲೇ ಈ ಭಾಗದಲ್ಲಿ ಸಾರಾಸಗಟಾಗಿ ದಲಿತ (ಎಡಗೈ) ಬಲ ಬಿಜೆಪಿ ಬೆನ್ನಿಗೆ ನಿಂತಿತು’ ಎಂದು ಬಳ್ಳಿ ಸ್ಮರಿಸುತ್ತಾರೆ.

‘ಬಾಗಲಕೋಟೆಗೆ ಬಂದರೆ ವೆಂಕಟಪೇಟೆಯ ಮಿರ್ಜಿ ಅವರ ಮನೆಯ ಅಟ್ಟದ ಮೇಲಿನ ತಮ್ಮ ಸಣ್ಣ ಕೊಠಡಿಯಲ್ಲಿ (ಈಗ ಮುಳುಗಡೆಯಾಗಿದೆ) ಅನಂತಕುಮಾರ್ ಉಳಿಯುತ್ತಿದ್ದರು’ ಎಂದು ಆ ದಿನಗಳನ್ನು ಬಳ್ಳಿ ನೆನಪಿಸಿಕೊಳ್ಳುತ್ತಾರೆ.

* ಇವನ್ನೂ ಓದಿ...

ಬಿಜೆಪಿ ನಾಯಕ, ಕೇಂದ್ರ ಸಚಿವ ಅನಂತಕುಮಾರ್ ಇನ್ನಿಲ್ಲ

* ಅನಂತ ಜೀವನಯಾನ

* ‘ಸುಮೇರು’ ಆವರಿಸಿದ ಅನಂತ ದುಃಖ

‘ಹಸಿರು ಬೆಂಗಳೂರು’ ಕನಸು ಕಂಡ ಅದಮ್ಯ ಚೇತನ ಅನಂತಕುಮಾರ್

* ಅನಂತ್: ದೆಹಲಿ ರಾಜಕಾರಣದ ಒಳಮನೆ ಹೊಕ್ಕ ವಿರಳ ಕನ್ನಡಿಗ

ವಿಶಿಷ್ಟ ಆಲೋಚನೆಗಳ ಸಂಘಟನಾ ಚತುರ

ಅನಂತಕುಮಾರ್‌ಗೆ ಮೋದಿ ಅಂತಿಮ ನಮನ​

*  ಅನಂತಕುಮಾರ್‌ ಕೇಂದ್ರ, ರಾಜ್ಯ ಸರ್ಕಾರಕ್ಕೆ ಕೊಂಡಿಯಂತೆ ಇದ್ದರು: ಯಡಿಯೂರಪ್ಪ

‘ಬಿಜೆಪಿಯ ಬಹುದೊಡ್ಡ ಆಸ್ತಿ’: ಅನಂತಕುಮಾರ್ ಸೇವೆ ನೆನಪಿಸಿಕೊಂಡ ರಾಷ್ಟ್ರ ನಾಯಕರು

* ಒಳ್ಳೆಯವರಿಗೆ ದೇವರು ಅನ್ಯಾಯ ಮಾಡಿಬಿಟ್ಟ; ಸಂಸದ ಪ್ರಹ್ಲಾದ ಜೋಶಿ

* ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಾಪ

ಅನಂತ್ ಇಲ್ಲದ ಬಿಜೆಪಿಯನ್ನು ಊಹಿಸಲಿಕ್ಕೂ ಸಾಧ್ಯವಿಲ್ಲ: ಸುರೇಶ್‌ಕುಮಾರ್

* ರಾಜಕೀಯ ಕಾರ್ಯಭಾರದಲ್ಲಿ ರೋಗಲಕ್ಷಣ ನಿರ್ಲಕ್ಷಿಸಿದ್ದರೆ ಅನಂತಕುಮಾರ್?

‘ಶೋಕಾಚರಣೆಯ ದಿನವಾಗದೆ ಕ್ಯಾನ್ಸರ್‌ಗೆ ತುತ್ತಾಗುವವರ ಭವಿಷ್ಯದ ಬಗ್ಗೆ ಚಿಂತಿಸಿ’

ಅನಂತಕುಮಾರ್‌ ನೆನೆದು ಕಣ್ಣೀರಿಟ್ಟ ಸಂಸದ ಪ್ರತಾಪ್‌ ಸಿಂಹ

ಟಾಟಾ ಎಸ್ಟೇಟ್‌ ಕಾರಲ್ಲಿ ಹಳ್ಳಿಹಳ್ಳಿ ಸಂಚರಿಸಿದ್ದೆವು: ಬೆಲ್ಲದ

90 ವರ್ಷದವರೆಗೆ ಬದುಕುತ್ತೀನಿ ಅಂದಿದ್ದ ಅನಂತಕುಮಾರ್‌!

ಗುರುಮಠಕಲ್ ವಶಕ್ಕಾಗಿ ‘ಅನಂತ’ ಯತ್ನ

ಬೆಳಗಾವಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ‘ಅನಂತ’

* ಭಿನ್ನ ವಿಚಾರಧಾರೆ ಗೌರವಿಸುತ್ತಿದ್ದ ನಾಯಕ: 80ರ ದಶಕದಿಂದ ಬಾಗಲಕೋಟೆ ನಂಟು

ಬಿಜೆಪಿಗೆ ‘ದಲಿತ’ ಬಲ ತುಂಬಿದ್ದ ಅನಂತಕುಮಾರ್

ಉತ್ತರ ಕನ್ನಡ ಜಿಲ್ಲೆಯಲ್ಲೂ ‘ಅನಂತ’ ಹೆಜ್ಜೆ ಗುರುತು

ಅನಂತಕುಮಾರ್‌ ರಾಣೆಬೆನ್ನೂರಿಗೆ ಬಂದಿದ್ದ ಕ್ಷಣಗಳ ನೆನಪು

* ಶಿವಮೊಗ್ಗ ಜಿಲ್ಲೆಯ ನಾಯಕರ ಒಡನಾಟದಲ್ಲಿ ‘ಅನಂತ’ ನೆನಪು

ವಿಜಯಪುರ: ಅವಿಭಜಿತ ಜಿಲ್ಲೆಯೊಂದಿಗೆ ಅನಂತಕುಮಾರ್‌ ಅವಿನಾಭಾವ ಸಂಬಂಧ

ಗೊರಕೆ ತಡೆಗೆ ಅನಂತಕುಮಾರ ಹೆಬ್ಬೆರಳಿಗೆ ದಾರ!

ರಾಮನಗರ ಜಿಲ್ಲೆ ನಂಟು: ತಂಗಿ ಮಗಳ ನೆನಪಲ್ಲಿ ಕಾಲೇಜು ಸ್ಥಾಪಿಸಿದ್ದ ಅನಂತ್‌ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !