ಪ್ರಿಯಾಂಕಾ ದಾಖಲೆ ಡಬಲ್

7
ಆರ್‌ಜಿಯುಎಚ್‌ಎಸ್‌ ಅಂತರ ಕಾಲೇಜು ಅಥ್ಲೆಟಿಕ್‌ ಕ್ರೀಡಾಕೂಟ

ಪ್ರಿಯಾಂಕಾ ದಾಖಲೆ ಡಬಲ್

Published:
Updated:
Deccan Herald

ದಾವಣಗೆರೆ: ಮೂಡುಬಿದಿರೆಯ ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌ನ ವಿದ್ಯಾರ್ಥಿನಿ ಪ್ರಿಯಾಂಕಾ ಸೋಮವಾರ ಇಲ್ಲಿ ಆರಂಭವಾದ 19ನೇ ವರ್ಷದ ರಾಜೀವ್‌ ಗಾಂಧಿ ಅಂತರ ಕಾಲೇಜು ಅಥ್ಲೆಟಿಕ್‌ ಕ್ರೀಡಾಕೂಟದ ಶಾಟ್‌ಪಟ್‌ ಹಾಗೂ ಡಿಸ್ಕಸ್‌ ಥ್ರೋನಲ್ಲಿ ಚಿನ್ನದ ಪದಕ ಗೆದ್ದು ನೂತನ ಕೂಟ ದಾಖಲೆ ಮಾಡಿದರು.

ನಗರದ ಜೆ.ಜೆ.ಎಂ. ವೈದ್ಯಕೀಯ ಕಾಲೇಜು ಆಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದ ಮೊದಲ ದಿನ ಒಟ್ಟು ಆರು ಕೂಟ ದಾಖಲೆಗಳನ್ನು ಕ್ರೀಡಾಪಟುಗಳು ಬರೆದರು.

ಶಾಟ್‌ಪಟ್‌ನಲ್ಲಿ ಪ್ರಿಯಾಂಕಾ 10.08 ಮೀಟರ್‌ ದೂರ ಎಸೆಯುವ ಮೂಲಕ ಮೂಡಬಿದಿರೆಯ ಆಳ್ವಾಸ್‌ ಎಎಂಸಿಯ ರೇಷ್ಮಾ (ದೂರ: 9.20 ಮೀ.: 2007-08) ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಡಿಸ್ಕಸ್‌ ಥ್ರೋನಲ್ಲೂ ಅವರು 33.85 ಮೀ. ದೂರ ಎಸೆಯುವ ಮೂಲಕ ಆಳ್ವಾಸ್‌ ಸಿಎಚ್‌ಎಂಸಿ ಕಾಲೇಜಿನ ಚೈತ್ರಾ (ದೂರ: 26.68 ಮೀ.: 2017–18) ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.  ಪುರುಷರ ವಿಭಾಗದ ಹೈಜಂಪ್‌ನಲ್ಲಿ ಆಳ್ವಾಸ್‌ ಕಾಲೇಜ್ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌ನ ಮೋತಿ ಅರುಣ್‌ ಎ. 1.96 ಮೀಟರ್‌ ಎತ್ತರ ಜಿಗಿದು ಆಳ್ವಾಸ್‌ ಸಿಎಚ್‌ಎಂಎಸ್‌ನ ರಾಹುಲ್‌ (ದೂರ: 1.95 ಮೀ. 2017–18) ದಾಖಲೆಯನ್ನು ಅಳಿಸಿಹಾಕಿದರು.

ಮಹಿಳೆಯರ ವಿಭಾಗದ ಹೈಜಂಪ್‌ನಲ್ಲಿ ಅದೇ ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌ನ ಸಂಧ್ಯಾ 1.63 ಮೀಟರ್‌ ಎತ್ತರಕ್ಕೆ ಜಿಗಿಯುವ ಮೂಲಕ ಆಳ್ವಾಸ್‌ ಸಿ.ಎನ್‌. ಆ್ಯಂಡ್‌ ಐ.ಎಸ್‌.ನ ಸೃಜನ್‌ ಕೆ. (ದೂರ: 1.29 ಮೀ. 2013–14) ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.

ಪುರುಷರ ಶಾಟ್‌ಪಟ್‌ನಲ್ಲಿ ಸುಳ್ಯಾದ ಕೆ.ವಿ.ಜಿ ಡೆಂಟಲ್‌ ಕಾಲೇಜಿನ ನಿಯೋಲ್‌ ಥಾಮಸ್‌ ಅಬ್ರಹಾಂ 11.56 ಮೀಟರ್‌ ದೂರ ಎಸೆದು, ತಮ್ಮ ದಾಖಲೆಯನ್ನೇ (ದೂರ: 11.31 ಮೀ. 2018–18) ಉತ್ತಮಪಡಿಸಿದರು.

ಮಹಿಳೆಯರ 10,000 ಮೀ. ಓಟದಲ್ಲಿ ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌ನ ಸುಪ್ರೀತ್‌ ಬಿ.ಕೆ. 43 ನಿಮಿಷ 28.55ನಲ್ಲಿ ಗುರಿ ಮುಟ್ಟಿದರು. ಆಳ್ವಾಸ್‌ನ ಸಿಎಚ್‌ಎಂಸಿಯ ನಿವುರುಥಾ ಧಾರವಾಡ (ಸಮಯ: 48:07.1 ಸೆ. 2017–18) ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.

ಫಲಿತಾಂಶ

ಪುರುಷರು:  200 ಮೀಟರ್ಸ್‌ ಓಟ: ರಿತೇಶ್‌ ಕುಮಾರ್‌ ಶೆಟ್ಟಿ (ಆಳ್ವಾಸ್‌ ಸಿ.ಎಚ್‌.ಎ, ಮೂಡುಬಿದಿರೆ; ಕಾಲ: 23.58 ಸೆಕೆಂಡು)–1, ನೀರಜ್‌ ಕೇರ್ಕರ್‌ (ಎಸ್‌ಡಿಎಂ ಫಿಸಿಯೋಥೆರಪಿ, ಧಾರವಾಡ)–2, ಮಹಮ್ಮದ್‌ ಎಂ. (ಆದಿತ್ಯ ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಫಾರ್ಮಸಿ)–3; 800 ಮೀ. ಓಟ: ಜಿತಿನ್‌ ಎಸ್‌.ಎಂ. (ಆಳ್ವಾಸ್‌ ಸಿ.ಎಚ್‌.ಎ; ಕಾಲ: 2ನಿಮಿಷ, 17.26 ಸೆ.)–1, ಜಸ್ಟಿನ್‌ ಕೆ. ಮ್ಯಾಥ್ಯೂ (ನಾರಾಯಣ ಹೃದಯಾಲಯ ಅಲೈಡ್‌ ಹೆಲ್ತ್‌, ಬೆಂಗಳೂರು)–2, ನೀರಜ್‌ ಕೇರ್ಕರ್‌ (ಎಸ್‌ಡಿಎಂ ಫಿಸಿಯೋಥೆರಪಿ ಕಾಲೇಜು, ಧಾರವಾಡ)–3. 10,000 ಮೀ. ಓಟ: ಬಬನ್‌ ಧವನ್‌ (ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌; ಕಾಲ: 33ನಿ, 35.47)–1, ಕಯಾಮ್‌ ಮೌಲಾ ಶೇಖ್‌ (ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌)–2, ಯಶವಂತ್‌ ಪಿ. (ಶ್ರೀನಿವಾಸ್‌ ಫಾರ್ಮಸಿ ಕಾಲೇಜು, ಮಂಗಳೂರು)–3 ಶಾಟ್‌ಪಟ್‌: ನಿಯೋಲ್‌ ಥಾಮಸ್‌ ಅಬ್ರಹಾಂ (ಕೆ.ವಿ.ಜಿ. ಡೆಂಟಲ್‌ ಕಾಲೇಜು, ಸುಳ್ಯಾ; ದೂರ: 11.56 ಮೀ)–1, ನಂದನ್‌ (ಎಸ್‌ಡಿಎಂ ಇನ್‌ಸ್ಟಿಟ್ಯೂಟ್‌ ಆಫ್‌ ಆಯುರ್ವೇದ, ಅಂಚೆಪಾಳ್ಯ)–2, ನಿಖಿಲ್ ಗೌಡ (ಸಪ್ತಗಿರಿ ವೈದ್ಯಕೀಯ ಕಾಲೇಜು, ಬೆಂಗಳೂರು)–3; ಡಿಸ್ಕಸ್‌ ಥ್ರೋ: ಕ್ಲೆಮೆಂಟ್‌ ರೋಸ್‌ (ಸೇಂಟ್‌ ಜಾನ್ಸ್‌ ಮೆಡಿಕಲ್‌ ಕಾಲೇಜು, ಬೆಂಗಳೂರು; ದೂರ: 30.11 ಮೀ)–1, ನಿಯೋಲ್‌ ಥಾಮಸ್‌ ಅಬ್ರಹಾಂ (ಕೆ.ವಿ.ಜಿ. ಡೆಂಟಲ್‌ ಕಾಲೇಜು, ಸುಳ್ಯಾ)–2, ಸ್ಟೀವ್‌ ಅಬ್ರಾಹಂ (ಲಕ್ಷ್ಮಿ ಮೆಮೊರಿಯಲ್‌ ಕಾಲೇಜ್‌ ಆಫ್ ಫಿಸಿಯೋಥೆರಪಿ, ಮಂಗಳೂರು)–3; ಹೈಜಂಪ್‌: ಮೋತಿ ಅರುಣ್‌ ಎ. (ಆಳ್ವಾಸ್‌ ಎ.ಸಿ.ಎಚ್‌, ಮೂಡುಬಿದಿರೆ; ಎತ್ತರ: 1.96 ಮೀ.)–1, ಜಾಕೋಬ್ ಮ್ಯಾಥ್ಯೂ (ನಾರಾಯಣ ಹೃದಯಾಲಯ ಫಿಸಿಯೋಥೆರಪಿ, ಬೆಂಗಳೂರು)–2, ಸೋಹನ್‌ ಎಂ.ಎನ್‌ (ಶಿವಮೊಗ್ಗ ವೈದ್ಯಕೀಯ ಕಾಲೇಜು)–3; ಪುರುಷರ 4X100 ಮೀ ರಿಲೆ: ಆಳ್ವಾಸ್‌ ಸಿ.ಎಚ್‌.ಎ, ಮೂಡುಬಿದಿರೆ (ಸಮಯ: 47.18 ಸೆ.; ಮೋತಿ ಅರುಣ್‌ ಎ, ಕೆ. ಕಪಿಲ್‌ ಆನಂದ್‌, ರಿತೇಶ್‌ ಕುಮಾರ್‌ ಶೆಟ್ಟಿ, ಜಿ. ಕಾರ್ತಿಕ್‌)–1, ನಾರಾಯಣ ಹೃದಯಾಲಯ ಆರೋಗ್ಯ ವಿಜ್ಞಾನ, ಬೆಂಗಳೂರು (ಬಿಸ್‌ ಬಸಿಲ್‌ ಬಾಯ್‌, ಜಸ್ಟಿನ್‌ ಕೆ. ಮ್ಯಾಥ್ಯೂ, ಪ್ರಣವ್‌, ಮಹಮ್ಮದ್‌ ಮಿಥಿಲಾಜ್‌)–2, ಕೆ.ವಿ.ಜಿ. ಡೆಂಟಲ್‌ ಕಾಲೇಜು, ಸುಳ್ಯಾ (ಮಹಮ್ಮದ್‌ ಸಾಜದ್‌, ಮಹಮ್ಮದ್‌ ಫರ್ಜೀನ್‌, ಚೇತನ್ ಶ್ಯಾಮ್‌, ಪವಿನ್‌ ಕೆ. ಪ್ರಸಾದ್‌)–3;

ಮಹಿಳೆಯರು: 200 ಮೀ. ಓಟ: ನಿಖಿತಾ ದರೇಕರ್‌ (ಆಳ್ವಾಸ್‌ ಸಿಎಚ್‌ಎ, ಮೂಡುಬಿದಿರೆ; ಸಮಯ: 29.37 ಸೆ.)–1, ಸ್ನೇಹಾ ಎಚ್‌. (ಕೊಡಗು ವೈದ್ಯಕೀಯ ಕಾಲೇಜು)–2, ವೈಷ್ಣವಿ (ಎ.ಜೆ. ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌, ಮಂಗಳೂರು)–3; 800 ಮೀ ಓಟ: ಸಮೀಕ್ಷಾ (ಆಳ್ವಾಸ್‌ ಸಿಎಚ್‌ಎ, ಮೂಡುಬಿದಿರೆ; ಸಮಯ: 2ನಿ,46.29 ಸೆ.)–1, ರಮ್ಯಾ (ಫಾದರ್‌ ಮುಲ್ಲರ್ಸ್‌ ನರ್ಸಿಂಗ್‌ ಕಾಲೇಜು, ಮಂಗಳೂರು)–2, ಅಂಜು ತ್ರೇಸಾ ಬೇಬಿ (ನಾರಾಯಣ ಹೃದಯಾಲಯ ನರ್ಸಿಂಗ್‌ ಕಾಲೇಜು, ಬೆಂಗಳೂರು)–3; 10,000 ಮೀ ಓಟ: ಸುಪ್ರೀತ್‌ ಬಿ.ಕೆ (ಸಮಯ: 43ನಿ,28.55 ಸೆ.)–1, ಮಮತಾ ದ್ಯಾಮಣ್ಣವರ (ಸರ್ಕಾರಿ ನರ್ಸಿಂಗ್‌ ಕಾಲೇಜು, ಕಿಮ್ಸ್‌, ಹುಬ್ಬಳ್ಳಿ)–2, ವಹೀದಾ ಬಾನು (ಎಸ್‌ಡಿಎಂ ನರ್ಸಿಂಗ್‌ ಕಾಲೇಜು, ಧಾರವಾಡ)–3; ಡಿಸ್ಕಸ್‌ ಥ್ರೋ: ಪ್ರಿಯಾಂಕಾ (ಆಳ್ವಾಸ್‌ ಸಿ.ಎಚ್‌.ಎ, ಮೂಡುಬಿದಿರೆ; ದೂರ: 33.85 ಮೀ.)–1, ದೇವತಾ ನಾಯ್ಕ (ಎಸ್‌ಡಿಎಂ ಫಿಸಿಯೋಥೆರಪಿ ಕಾಲೇಜು, ಧಾರವಾಡ)–2, ಸಿಂಥಿಯಾ ಗೌಡೆಲ್ಲರ್‌ (ಸರ್ಕಾರಿ ನರ್ಸಿಂಗ್‌ ಕಾಲೇಜು, ಕಿಮ್ಸ್‌, ಹುಬ್ಬಳ್ಳಿ)–3; ಶಾಟ್‌ಪಟ್‌: ಪ್ರಿಯಾಂಕಾ (ಆಳ್ವಾಸ್‌ ಸಿ.ಎಚ್‌.ಎ, ಮೂಡುಬಿದಿರೆ; ದೂರ: 10.08 ಮೀ)–1, ಡೆಲ್ಲಾ ಗೌಡೆಲ್ಲರ್‌ (ಸರ್ಕಾರಿ ನರ್ಸರಿ ಕಾಲೇಜು, ಕಿಮ್ಸ್‌, ಹುಬ್ಬಳ್ಳಿ)–2, ಫಿರ್ದೋಸ್‌ ಬಾನು (ನಾರಾಯಣ ಹೃದಯಾಲಯ ಫಿಸಿಯೋಥೆರಪಿ ಕಾಲೇಜು, ಬೆಂಗಳೂರು)–3; ಹೈಜಂಪ್‌: ಸಂಧ್ಯಾ (ಆಳ್ವಾಸ್‌ ಸಿಎಚ್‌ಎ, ಮೂಡಬಿದಿರೆ, ಎತ್ತರ: 1.63 ಮೀ.)–1, ಐಶ್ವರ್ಯಾ ಎಂ. (ಆಳ್ವಾಸ್‌ ನ್ಯಾಚುರೋಪಥಿ, ಯೋಗಿಕ್‌ ಸೈನ್ಸ್‌, ಮೂಡಬಿದಿರೆ)–2, ಅರ್ಪಿತಾ ರಾವ್‌ (ಜೆ.ಜೆ.ಎಂ. ವೈದ್ಯಕೀಯ ಕಾಲೇಜು, ದಾವಣಗೆರೆ)–3;

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !