ಭಾನುವಾರ, ಡಿಸೆಂಬರ್ 8, 2019
25 °C

ಜನಾಗ್ರಹ ಆಂದೋಲನ: ಟಂಟಂ ರ್‍ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬಾಗಲಕೋಟೆ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಜನಾಗ್ರಹ ಆಂದೋಲನದ ಹಿನ್ನೆಲೆಯಲ್ಲಿ ಶುಕ್ರವಾರ ವಿಶ್ವ ಹಿಂದು ಪರಿಷತ್ ವತಿಯಿಂದ ‘ಟಂ ಟಂ (ಆಟೋ) ರ್‍ಯಾಲಿ’ ಹಮ್ಮಿಕೊಳ್ಳಲಾಗಿತ್ತು.

ಇಲ್ಲಿನ ಬಿ.ವಿ.ವಿ ಸಂಘದ ಬೀಳೂರ ಅಜ್ಜನ ಗುಡಿಯಿಂದ ಪ್ರಾರಂಭವಾದ ರ್‍ಯಾಲಿಗೆ ಜೈಪುರದ ಮದನ ಮೋಹನ ಸ್ವಾಮೀಜಿ ಚಾಲನೆ ನೀಡಿದರು. ಸಂಘದಿಂದ ಆರಂಭವಾದ ರ್‍ಯಾಲಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರ್‍ಯಾಲಿಯಲ್ಲಿ 250 ಕ್ಕೂ ಹೆಚ್ಚು ಟಂಟಂಗಳು ಪಾಲ್ಗೊಂಡಿದ್ದವು.

ವಿಶ್ವ ಹಿಂದೂಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಸಂಗಣ್ಣ ಕುಪ್ಪಸ್ತ, ಆರ್.ಎಸ್.ಎಸ್ ಕಾರ್ಯವಾಹ ವಿಜಯ ಸುಲಾಖೆ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಮುಖಂಡರಾದ ಅಶೋಕ ಲಿಂಬಾವಳಿ, ಅಶೋಕ ಲಾಗಲೋಟಿ, ಬಸವರಾಜ ಯಂಕಂಚಿ, ರಾಜು ನಾಯ್ಕರ್, ರವಿರಾಜ ಬಾಗೇವಾಡಿ, ಅಶೋಕ ಮುತ್ತಿನಮಠ, ಜಯಪ್ರಕಾಶ ಬೆಂಡಿಗೇರಿ, ಪುಂಡಲಿಕ ದಳವಾಯಿ, ನಗರಸಭೆ ಸದಸ್ಯರಾದ ವೀರಪ್ಪ ಶಿರಗಣ್ಣನವರ್, ಬಸವರಾಜ ಅವರಾದಿ, ರವಿ ದಾಮಜಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)