ವಿಮಾನ ನಿಲ್ದಾಣ ಖಾಸಗೀಕರಣ ಕೈಬಿಡಿ: ಸಚಿವ ಯು.ಟಿ.ಖಾದರ್‌ ಆಗ್ರಹ

7

ವಿಮಾನ ನಿಲ್ದಾಣ ಖಾಸಗೀಕರಣ ಕೈಬಿಡಿ: ಸಚಿವ ಯು.ಟಿ.ಖಾದರ್‌ ಆಗ್ರಹ

Published:
Updated:

ಮಂಗಳೂರು: ‘ಕರಾವಳಿ ಜನರೊಂದಿಗೆ ಕಿಂಚಿತ್ತೂ ಮಾಹಿತಿ ಹಂಚಿಕೊಳ್ಳದೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ತಕ್ಷಣವೇ ಈ ಪ್ರಯತ್ನವನ್ನು ಕೈಬಿಡಬೇಕು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ ಆಗ್ರಹಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಂಗಳೂರು ವಿಮಾನ ನಿಲ್ದಾಣದ ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರ ಮಹತ್ವದ ಪಾತ್ರ ವಹಿಸಿದೆ. ಜಿಲ್ಲೆಯ ಜನರೂ ಕೊಡುಗೆ ನೀಡಿದ್ದಾರೆ. ಆದರೆ, ಜಿಲ್ಲೆಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ವಿಮಾನ ನಿಲ್ದಾಣವನ್ನು ಖಾಸಗೀಕರಣ ಮಾಡಲು ಹೊರಟಿರುವುದು ಸರಿಯಲ್ಲ’ ಎಂದರು.

ವಿಮಾನ ನಿಲ್ದಾಣದಲ್ಲಿ ಈಗ ಕೆಲಸ ಮಾಡುತ್ತಿರುವ ನೌಕರರಲ್ಲಿ ಆತಂಕ ಮೂಡಿದೆ. ಟ್ಯಾಕ್ಸಿ ಚಾಲಕರೂ ಆತಂಕದಲ್ಲಿದ್ದಾರೆ. ವಿಮಾನ ನಿಲ್ದಾಣಕ್ಕೆ ಶ್ರೀನಿವಾಸ ಮಲ್ಯರ ಹೆಸರಿಡಬೇಕೆಂಬ ಆಗ್ರಹವಿದೆ. ರಾಜ್ಯ ಸರ್ಕಾರ ಅಭಿವೃದ್ಧಿಯ ಕುರಿತು ಯೋಚಿಸುತ್ತಿದೆ. ಆದರೆ, ಕೇಂದ್ರ ಸರ್ಕಾರ ಖಾಸಗೀಕರಣದ ಮೂಲಕ ಬಂಡವಾಳಷಾಹಿಗಳ ಕೈಗೆ ನೀಡಲು ಹೊರಟಿದೆ ಎಂದು ಟೀಕಿಸಿದರು.

‘ಕೇರಳದಲ್ಲೂ ಒಂದು ವಿಮಾನ ನಿಲ್ದಾಣವನ್ನು ಖಾಸಗೀಕರಣ ಮಾಡುವ ಪ್ರಸ್ತಾವವಿತ್ತು. ಅದರಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿದೆ. ಮಂಗಳೂರು ವಿಮಾನ ನಿಲ್ದಾಣದ ಖಾಸಗೀಕರಣವನ್ನು ನಾವು ಒಪ್ಪುವುದಿಲ್ಲ. ಸಂಪುಟ ಸಭೆಯಲ್ಲಿ ಚರ್ಚಿಸಿ, ವಿರೋಧ ದಾಖಲಿಸಲಾಗುವುದು. ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರ ಜೊತೆಗೂ ಚರ್ಚಿಸುವೆ. ಸಂಸತ್ತಿನ ಅಧಿವೇಶನದಲ್ಲಿ ಈ ಕುರಿತು ಮಾತನಾಡುವಂತೆ ಒತ್ತಾಯಿಸುವೆ’ ಎಂದರು.

 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !