ಡಿ.ಸಿ ಕಚೇರಿಯಲ್ಲಿ ಹೆಜ್ಜೇನು ದಾಳಿ

7

ಡಿ.ಸಿ ಕಚೇರಿಯಲ್ಲಿ ಹೆಜ್ಜೇನು ದಾಳಿ

Published:
Updated:

ಕೋಲಾರ: ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಸಂಜೆ ಸಾರ್ವಜನಿಕರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.

ಲೋಕಸಭಾ ಚುನಾವಣಾ ಸಿದ್ಧತೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜನೆಯಾಗಿದ್ದ ಸಭೆಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಬೂತ್‌ ಮಟ್ಟದ ಅಧಿಕಾರಿಗಳು ಬಂದಿದ್ದರು. ಆದರೆ, ಸಭೆ ಆರಂಭವಾಗುವುದು ತಡವಾದ ಕಾರಣ ಅವರೆಲ್ಲಾ ಕಚೇರಿ ಆವರಣದಲ್ಲಿ ಕುಳಿತಿದ್ದರು.

ಆಗ ಕಚೇರಿ ಮುಂಭಾಗದ ಮೆಟ್ಟಿಲು ಹತ್ತಿ ಬರುತ್ತಿದ್ದ ವ್ಯಕ್ತಿ ಮೇಲೆ ಜೇನು ಹುಳುಗಳು ಏಕಾಏಕಿ ದಾಳಿ ನಡೆಸಿವೆ. ಇದರಿಂದ ಗಾಬರಿಯಾದ ಆ ವ್ಯಕ್ತಿ ನಿಶ್ಚಲವಾಗಿ ನಿಂತಲ್ಲೇ ನಿಂತರು. ಸಾಕಷ್ಟು ಸಮಯವಾದರೂ ಜೇನು ಹುಳುಗಳು ಅವರ ಸುತ್ತಲೇ ಸುತ್ತುತ್ತಿದ್ದವು. ಹುಳುಗಳು ಕಚ್ಚಲಾರಂಭಿಸಿದಾಗ ಅವರು ಸಹಾಯಕ್ಕಾಗಿ ಚೀರಿಕೊಂಡರು. ಅವರ ನೆರವಿಗೆ ಧಾವಿಸಿದ ಅಧಿಕಾರಿಗಳು ಕಾಗದಕ್ಕೆ ಬೆಂಕಿ ಹಚ್ಚಿ ಹುಳುಗಳನ್ನು ಓಡಿಸಿದರು.

ವ್ಯಕ್ತಿಯ ಮುಖ, ತಲೆ ಹಾಗೂ ಕತ್ತಿನ ಭಾಗಕ್ಕೆ ಸುಮಾರು 50 ಜೇನು ಹುಳು ಕಚ್ಚಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೇನು ದಾಳಿಯಿಂದ ಗಾಬರಿಯಾದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕೆಲ ಕಾಲ ಕೊಠಡಿಯಿಂದ ಹೊರ ಬರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !