ಪಿಬಿಎಲ್‌: ಸೆಮೀಸ್‌, ಫೈನಲ್‌ ಬೆಂಗಳೂರಿನಲ್ಲಿ

7

ಪಿಬಿಎಲ್‌: ಸೆಮೀಸ್‌, ಫೈನಲ್‌ ಬೆಂಗಳೂರಿನಲ್ಲಿ

Published:
Updated:

ಬೆಂಗಳೂರು: ಇದೇ ತಿಂಗಳ 22ರಂದು ಆರಂಭವಾಗಲಿರುವ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನ (ಪಿಬಿಎಲ್) ಸೆಮಿಫೈನಲ್ಸ್‌ ಮತ್ತು ಫೈನಲ್‌ಗೆ ಉದ್ಯಾನ ನಗರಿ ಆತಿಥ್ಯ ವಹಿಸಲಿದೆ. ಬೆಂಗಳೂರಿನಲ್ಲಿ ಒಟ್ಟು ಎಂಟು ದಿನ ಪಂದ್ಯಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ಕಳೆದ ಬಾರಿ ರನ್ನರ್ ಅಪ್ ಆಗಿದ್ದ ಬೆಂಗಳೂರು ರ‍್ಯಾಪ್ಟರ್ಸ್ ತಂಡದ ಮೊದಲ ಪಂದ್ಯ ಡಿಸೆಂಬರ್‌ 28ರಂದು ನಡೆಯಲಿದೆ. ಹೈದರಾಬಾದ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಅಹಮ್ಮದಾಬಾದ್‌ ಸ್ಮ್ಯಾಷ್‌ ಮಾಸ್ಟರ್ಸ್ ಎದುರು ರ‍್ಯಾಪ್ಟರ್ಸ್‌ ಸೆಣಸಲಿದೆ. 

ಕಳೆದ ಎರಡು ಆವೃತ್ತಿಗಳಲ್ಲಿ ಅವಧ್ ವಾರಿಯರ್ಸ್ ತಂಡದಲ್ಲಿದ್ದ ಕಿದಂಬಿ ಶ್ರೀಕಾಂತ್ ಈ ಬಾರಿ ಬೆಂಗಳೂರು ತಂಡದಲ್ಲಿದ್ದಾರೆ. ಅವರ ನೇತೃತ್ವದ ರ‍್ಯಾಪ್ಟರ್ಸ್‌ಗೆ ಸಾಯಿ ಪ್ರಣೀತ್‌ ಅವರ ಬಲವೂ ಇದೆ. ಪ್ರಣೀತ್ ಕಳೆದ ಬಾರಿ ಹೈದರಾಬಾದ್ ಹಂಟರ್ಸ್‌ನಲ್ಲಿದ್ದರು. ತಂಡ ಚಾಂಪಿಯನ್ ಆಗಿತ್ತು. ವಿಯೆಟ್ನಾಂನ ನೈಗುನ್‌ ಟೀನ್‌ ಮಿನ್ ಅವರೂ ಬೆಂಗಳೂರು ತಂಡದಲ್ಲಿದ್ದಾರೆ.   

ಮಹಿಳಾ ವಿಭಾಗದಲ್ಲಿ ವಿಯೆಟ್ನಾಂನ ವೂ ತಿ ತ್ರಾಂಗ್‌, ಪುರುಷರ ಡಬಲ್ಸ್‌ನಲ್ಲಿ ಇಂಡೊನೇಷ್ಯಾದ ಹೇಂದ್ರ ಸತ್ಯವಾನ್‌, ಮೊಹಮ್ಮದ್‌ ಅಶಾನ್‌ ಕಣಕ್ಕೆ ಇಳಿಯಲಿದ್ದಾರೆ. ಭಾರತದ ಯುವ ಆಟಗಾರರಾದ ಮಿಥುನ್ ಮಂಜುನಾಥ್‌, ಸಂಜನಾ ಸಂತೋಷ್‌ ಮುಂತಾದವರು ಕೂಡ ಈ ಬಾರಿ ಗಮನ ಸೆಳೆಯುವ ಸಾಧ್ಯತೆ ಇದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !