ದೇವೇಗೌಡರ ನೋಡಿ ಕಲಿಯಿರಿ: ಪಾಟೀಲ ಪುಟ್ಟಪ್ಪ ಕಿವಿಮಾತು

7

ದೇವೇಗೌಡರ ನೋಡಿ ಕಲಿಯಿರಿ: ಪಾಟೀಲ ಪುಟ್ಟಪ್ಪ ಕಿವಿಮಾತು

Published:
Updated:

ಬಾಗಲಕೋಟೆ: ‘ಕ್ಷೇತ್ರದ ಅಭಿವೃದ್ಧಿಯತ್ತ ಆಸಕ್ತಿ ತೋರದ ಈ ಭಾಗದ ಶಾಸಕರು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರನ್ನು ನೋಡಿ ಕಲಿಯಲಿ’ ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಕಿವಿಮಾತು ಹೇಳಿದರು.

ನಗರದಲ್ಲಿ ಭಾನುವಾರ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಇತ್ತೀಚೆಗೆ ದೇವೇಗೌಡರನ್ನು ಭೇಟಿ ಮಾಡಿದ್ದೆನು. ಆ ವೇಳೆ ಆರು ಹುಡುಗರು ಅಲ್ಲಿಗೆ ಬಂದಿದ್ದರು. ಅವರಿಗೆ ಕೆಲಸಕ್ಕೆ ಶಿಫಾರಸು ಮಾಡಿದ್ದರು. ಆ ಕೆಲಸ ನಮ್ಮ ಶಾಸಕರು ಮಾಡುತ್ತಿಲ್ಲ. ವರ್ಗಾವಣೆಯಲ್ಲಿ ವಿಪರೀತ ಹಣವಿದೆ. ಹಾಗಾಗಿ ಬಹುತೇಕರು ಅದೇ ದಂಧೆಯಲ್ಲಿ ನಿರತರಾಗಿದ್ದಾರೆ’ ಎಂದರು.

‘ಬೆಳಗಾವಿ ಜಿಲ್ಲೆಯನ್ನು ವಿಭಜಿಸದಿದ್ದರೆ ತೊಂದರೆ ಇಲ್ಲ. ಅಕಸ್ಮಾತ್ ವಿಭಜಿಸಿದರೆ ಗೋಕಾಕ, ಚಿಕ್ಕೋಡಿ, ಬೈಲಹೊಂಗಲದ ಬದಲಿಗೆ ನಿಪ್ಪಾಣಿಯನ್ನು ಜಿಲ್ಲೆಯಾಗಿ ಮಾಡಲಿ ಎಂದು ಪಾಟೀಲ ಪುಟ್ಟಪ್ಪ ಸಲಹೆ ನೀಡಿದರು. ನಿಪ್ಪಾಣಿ ಈಗಾಗಲೇ ಮಹಾರಾಷ್ಟ್ರದ ಭಾಗ ಎಂಬಂತಾಗಿದೆ. ಅದು ಸುರಕ್ಷಿತವಾಗಿ ಉಳಿಯಬೇಕಾದರೆ ಜಿಲ್ಲೆಯಾಗಿ ರೂಪುಗೊಳ್ಳಬೇಕು’ ಎಂದರು.

ಉತ್ತರ ಕರ್ನಾಟಕದ ನಿರ್ಲಕ್ಷ್ಯ ಎಷ್ಟು ಕಾಲ ಸಹಿಸಿಕೊಳ್ಳಲು ಆಗುತ್ತದೆ. ಹಾಗಾಗಿ ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಪಾಪು, ‘ಕರ್ನಾಟಕದ ಎಲ್ಲ ತೊಂದರೆಗೂ ಬೆಂಗಳೂರು ರಾಜಧಾನಿಯಾಗಿರುವುದೇ ಕಾರಣ. ಕರ್ನಾಟಕ ಎಂದರೆ ಬರೀ ದಕ್ಷಿಣ ಭಾಗ ಎಂಬಂತಾಗಿದೆ. ಮಂತ್ರಿಗಳೆಲ್ಲಾ ಬೆಂಗಳೂರಿನಲ್ಲಿ, ಕಚೇರಿಗಳು ಮಾತ್ರ ಬೆಳಗಾವಿಯಲ್ಲಿ. ಇದೆಲ್ಲಾ ವಿಚಿತ್ರ ಎನಿಸುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !