ಬುಧವಾರ, ಡಿಸೆಂಬರ್ 11, 2019
27 °C
ಟಿಪ್ಪು ಸುಲ್ತಾನ್‌ ಸಂಘಟನೆಯಿಂದ ಕರಾಳ ದಿನ ಆಚರಣೆ

ಬಾಬರಿ ಮಸೀದಿ ಕೆಡವಿದವರ ಬಂಧಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬಾಗಲಕೋಟೆ: ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ ಸಂಘಟನೆಗಳನ್ನು ದೇಶದಲ್ಲಿ ನಿಷೇಧಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಟಿಪ್ಪು ಸಲ್ತಾನ್ ಸಂಘಟನೆಯಿಂದ ಗುರುವಾರ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು 1992 ರಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಲು ಕಾರಣರಾದ ಬಿಜೆಪಿ ಹಾಗೂ ವಿವಿಧ ಸಂಘಟನೆಗಳ ಮುಖಂಡರನ್ನು ದೇಶದ್ರೋಹ ಪ್ರಕರಣದಡಿ ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದರು. ನಂತರ ಸಂಘಟನೆ ಮುಖಂಡ ಎಸ್.ಎಂ.ಮೋಮಿನ್ ನೇತೃತ್ವದಲ್ಲಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೋಮಿನ್, ‘ಪ್ರಜಾಸತ್ತಾತ್ಮಕ ಧೋರಣೆಗಳನ್ನು ಹೊಂದಿದ ಭಾರತದಲ್ಲಿ 1992ರ ಡಿಸೆಂಬರ್ 6 ರಂದು ವಿವಿಧ ಹಿಂದು ಸಂಘಟನೆಗಳು ಐತಿಹಾಸಿಕ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿ ದೇಶದ ಸಂಸ್ಕೃತಿಗೆ ಕಪ್ಪು ಚುಕ್ಕೆ ತಂದಿವೆ. ಅಂತಹ ಸಂಘಟನೆಗಳನ್ನು ದೇಶದಲ್ಲಿ ನಿಷೇಧಿಸಬೇಕು’ ಎಂದು ಆಗ್ರಹಿಸಿದರು.

‘ಬಾಬರಿ ಮಸೀದಿ ಧ್ವಂಸಗೊಂಡು ದಿನವನ್ನು ದೇಶಾದ್ಯಂತ ಕರಾಳ ದಿನವಾಗಿ ಆಚರಿಸಲಾಗುತ್ತಿದೆ. ಘಟನೆ ನಡೆದು 26 ವರ್ಷ ಕಳೆದರೂ, ಧ್ವಂಸಕ್ಕೆ ಕಾರಣ ಎಂದು ಹೇಳಿ ಕೊಳ್ಳುವ ನಾಯಕರ ಬಂಧನವಾಗುತ್ತಿಲ್ಲ. ಇದು ವಿಷಾದನೀಯ ಸಂಗತಿ. ದೇಶದ ಸಾಮರಸ್ಯ ಹಾಳು ಮಾಡುವ ಇಂತಹ ಮುಖಂಡರನ್ನು ದೇಶದ್ರೋಹ ಪ್ರಕರಣದಡಿ ಆದಷ್ಟು ಬೇಗ ಬಂಧಿಸಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಮುಖಂಡರಾದ ನಬಿಸಾಬ್ ಟಂಕಸಾಲಿ, ರಫೀಕ್ ಚೌಧರಿ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಎಂ.ಎ.ಮಿರ್ಜಿ, ಎಂ.ಎಸ್.ಪಣಿಬಂದ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು