ಮಂಗಳವಾರ, ಡಿಸೆಂಬರ್ 10, 2019
26 °C
ಲಾರಿ ಮಾಲೀಕರಿಂದ ಅರ್ಜಿ: ಕೇಂದ್ರ ಸರ್ಕಾರದ ಅಧಿಸೂಚನೆ ಉಲ್ಲೇಖಿಸಿದ ನ್ಯಾಯಾಲಯ

ಎಲೆಕ್ಟ್ರಾನಿಕ್‌ ರೂಪದ ದಾಖಲೆಗೆ ಅವಕಾಶ: ಮದ್ರಾಸ್‌ ಹೈಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಚೆನ್ನೈ: ಎಲೆಕ್ಟ್ರಾನಿಕ್‌ ರೂಪದಲ್ಲಿರುವ ವಾಹನಗಳ ದಾಖಲೆಗಳನ್ನು ತೋರಿಸಲು ಚಾಲಕರಿಗೆ ಅವಕಾಶವಿದೆ ಎಂದು ಮದ್ರಾಸ್‌ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಕಳೆದ ತಿಂಗಳು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಅನ್ವಯ ಪೊಲೀಸರು ಅಥವಾ ಯಾವುದೇ ಅಧಿಕಾರಿಗಳು ಚಾಲಕರನ್ನು ವಾಹನಗಳ ದಾಖಲೆಗಳ ಬಗ್ಗೆ ಕೇಳಿದಾಗ ಎಲೆಕ್ಟ್ರಾನಿಕ್‌ ರೂಪದಲ್ಲಿರುವುದನ್ನು ತೋರಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ.

ಲೈಸನ್ಸ್‌ ಸೇರಿದಂತೆ ಮೂಲ ದಾಖಲೆಗಳನ್ನೇ ಚಾಲಕರು ಹೊಂದಿರಬೇಕು ಎಂದು ತಮಿಳುನಾಡು ಸಂಚಾರ ಯೋಜನಾ ಘಟಕದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಅಖಿಲ ಭಾರತ ಸರಕು ವಾಹನಗಳ ಮಾಲೀಕರ ಸಂಘಟನೆಗಳ ಒಕ್ಕೂಟ ಸೇರಿದಂತೆ ಹಲವು ಲಾರಿ ಮಾಲೀಕರ ಸಂಘಟನೆಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದವು.

ವಾಹನಗಳ ದಾಖಲೆಗಳ ಕುರಿತು ಕೇಂದ್ರೀಯ ಮೋಟಾರು ವಾಹನ ನಿಯಮಾವಳಿ 139ಕ್ಕೆ ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿ ಅನ್ವಯ ಲೈಸನ್ಸ್‌, ವಿಮೆ, ವಾಹನ ಸ್ಥಿತಿಗತಿ ಪ್ರಮಾಣಪತ್ರ, ಮಾಲಿನ್ಯ ತಪಾಸಣೆ ಪ್ರಮಾಣಪತ್ರಗಳನ್ನು ಮೂಲ ರೂಪದಲ್ಲಿ ಅಥವಾ ಎಲೆಕ್ಟ್ರಾನಿಕ್‌ ರೂಪದಲ್ಲಿಯೂ ತೋರಿಸಲು ಅವಕಾಶವಿದೆ ಎಂದು ಸಂಘಟನೆಗಳು ಪ್ರತಿಪಾದಿಸಿದ್ದವು.

ಈ ಬಗ್ಗೆ ವಿಚಾರಣೆ  ನಡೆಸಿದ ನ್ಯಾಯಾಲಯ, ಕೇಂದ್ರ ಸರ್ಕಾರ ನವೆಂಬರ್‌ 2ರಂದು ತಿದ್ದುಪಡಿ ಮಾಡಿರುವುದರಿಂದ ಅರ್ಜಿ ಸಲ್ಲಿಕೆಗೆ ಅರ್ಥವಿಲ್ಲ ಎಂದು ಅಭಿಪ್ರಾಯಪಟ್ಟಿತು.

ನ್ಯಾಯಮೂರ್ತಿಗಳಾದ ಡಾ. ವಿನೀತ್‌ ಕೊಠಾರಿ ಮತ್ತು ಡಾ. ಅನಿತಾ ಸುಮಂತ್‌ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಬಗ್ಗೆ ಆದೇಶ ನೀಡಿತು.

 

 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು