ಹಸು ಸಾಗಣೆ ಆರೋಪ: ವಾಗ್ವಾದ

7

ಹಸು ಸಾಗಣೆ ಆರೋಪ: ವಾಗ್ವಾದ

Published:
Updated:

ಕೋಲಾರ: ಕಸಾಯಿಖಾನೆಗೆ ಹಸುಗಳನ್ನು ಸಾಗಿಸಲಾಗುತ್ತಿದೆ ಎಂದು ಆರೋಪಿಸಿ ಶ್ರೀರಾಮಸೇನೆ ಕಾರ್ಯಕರ್ತರು ನಗರದಲ್ಲಿ ಬುಧವಾರ ರಾತ್ರಿ ಟೆಂಪೊವನ್ನು ಅಡ್ಡಗಟ್ಟಿ ಚಾಲಕನ ಜತೆ ವಾಗ್ವಾದ ನಡೆಸಿದರು.

ದಾನಿಯೊಬ್ಬರು ನಗರದ ರೇಣುಕಾ ಯಲ್ಲಮ್ಮ ದೇವಸ್ಥಾನ ಟ್ರಸ್ಟ್‌ಗೆ ಸುಮಾರು 20 ಹಸುಗಳನ್ನು ದಾನವಾಗಿ ನೀಡಿದ್ದರು. ಟ್ರಸ್ಟ್‌ನ ಸದಸ್ಯರು ಹಸುಗಳನ್ನು ಟೆಂಪೊದಲ್ಲಿ ವಿಜಯಪುರ ಬಳಿಯ ಗೋಶಾಲೆಗೆ ಸಾಗಿಸುತ್ತಿದ್ದರು. ಈ ಸುದ್ದಿ ತಿಳಿದ ಶ್ರೀರಾಮಸೇನೆ ಕಾರ್ಯಕರ್ತರು ಇಟಿಸಿಎಂ ಆಸ್ಪತ್ರೆ ಬಳಿ ಟೆಂಪೊ ಅಡ್ಡಗಟ್ಟಿ ಚಾಲಕನನ್ನು ನಿಂದಿಸಿದ್ದಾರೆ.

ಬಳಿಕ ರೇಣುಕಾ ಯಲ್ಲಮ್ಮ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಕೃಷ್ಣಪ್ಪ ಅವರು ಸ್ಥಳಕ್ಕೆ ಬಂದು, ‘ಹಸುಗಳನ್ನು ಕಸಾಯಿಖಾನೆಗೆ ಮಾರಿಲ್ಲ. ಬದಲಿಗೆ ಗೋಶಾಲೆಗೆ ಸಾಗಿಸುತ್ತಿದ್ದೇವೆ’ ಎಂದು ಹೇಳಿದರು. ಆದರೂ ಶ್ರೀರಾಮಸೇನೆ ಕಾರ್ಯಕರ್ತರು ಅವರ ಜತೆಯೂ ವಾಗ್ವಾದ ನಡೆಸಿದ್ದಾರೆ. ನಂತರ ನಗರ ಠಾಣೆ ಪೊಲೀಸರು ಮಧ್ಯಪ್ರವೇಶಿಸಿ ಹಸುಗಳನ್ನು ದೇವಸ್ಥಾನಕ್ಕೆ ವಾಪಸ್‌ ಕಳುಹಿಸಿದರು. ಟೆಂಪೊ ಜಪ್ತಿ ಮಾಡಿರುವ ಪೊಲೀಸರು ಚಾಲಕನನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !