ಶನಿವಾರ, ಡಿಸೆಂಬರ್ 7, 2019
21 °C

ಫೀನಿಕ್ಸ್‌ನಲ್ಲಿ ‘ಫೋಕ್‌ ಫೆಸ್ಟಿವಲ್‌’

Published:
Updated:
Deccan Herald

ಫೀನಿಕ್ಸ್‌ ಮಾರ್ಕೆಟ್‌ ಸಿಟಿಯಲ್ಲಿ ಶನಿವಾರ ಮತ್ತು ಭಾನುವಾರ ಸಂಜೆ 6ಕ್ಕೆ ಜಾನಪದ ಮತ್ತು ಬ್ಯಾಂಡ್‌ ಸಂಗೀತ ಸಂಜೆ ಮೇಳೈಸಲಿದೆ.

ದೇಶದ ಖ್ಯಾತ ಸಂಗೀತ ಕಲಾವಿದ, ರಾಜಸ್ತಾನದ ಮೇಮ್‌ ಖಾನ್‌ ಅವರು ರಾಜಸ್ತಾನದ ಜಾನಪದ ಹಾಡು ಮತ್ತು ಸೂಫಿ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಸಂಗೀತದ ಮಾಸ್ಟರ್ಸ್‌ ಎನಿಸಿಕೊಂಡ ಗಾಯಕರ ಮನೆತನದವರು ಮೇಮ್‌ಖಾನ್. ಸಂಗೀತದಲ್ಲಿ ಇವರದು ಸುಮಾರು 15ನೇ ತಲೆಮಾರು. ಇವರ ತಂದೆ ಪ್ರಸಿದ್ಧ ಗಾಯಕ ರಾಣಾ ಖಾನ್‌.  

‘ಸೂಫಿ ಕೀ ಸುಲ್ತಾನ್‌’ ಎಂದೇ ಪ್ರಸಿದ್ಧರಾಗಿರುವ ಬಾಲಿವುಡ್‌ನ ಹಿನ್ನೆಲೆ ಗಾಯಕ ಹರ್ಷ್‌ದೀಪ್‌ ಕೌರ್‌ ಹಿಂದಿ, ಪಂಜಾಬಿ ಹಾಡುಗಳ ಜೊತೆಗೆ ಸೂಫಿ ಗೀತೆಗಳನ್ನು ಹಾಡಿ ರಂಜಿಸಲಿದ್ದಾರೆ. ಹಿಂದಿಯ ‘ಸಜ್ನಾ ಮೈ ಹಾರಿ’ಯ ಮೂಲಕ ಹಿನ್ನೆಲೆಗಾಯಕಿಯಾಗಿ ಪದಾರ್ಪಣೆ ಮಾಡಿದವರು ಹರ್ಷ್‌ದೀಪ್. ಆಗ ಆಕೆಗೆ ಕೇವಲ 16 ವರ್ಷ.

ಸಂತ ಕಬೀರರ ಹಾಡುಗಳನ್ನು ‘ಕಬೀರ್‌ ಕೆಫೆ’ ಬ್ಯಾಂಡ್‌ ತಂಡ ಪ್ರಸ್ತುತಪಡಿಸಲಿದೆ. ನೀರಜ್‌ ಆರ್ಯ ಅವರು ಈ ತಂಡದ ರೂವಾರಿ. ಕಬೀರ ಹಾಡುಗಳ ಗಾಯಕ ಪ್ರಹ್ಲಾದ್ ತಿಪ್ಪನಿಯಾ ಅವರ ಪ್ರಭಾವಕ್ಕೊಳಗಾಗಿ, ಸುಮಾರು ಆರು ವರ್ಷ ಕಬೀರ್‌ ಹಾಡುಗಳ ಕುರಿತು ಸಂಶೋಧನೆ ನಡೆಸಿ, ಈ ಕಾಲಕ್ಕೆ ಪ್ರಸ್ತುತವೆನಿಸುವ ಹಾಡುಗಳನ್ನು ಆಯ್ದುಕೊಂಡು ದೇಶದೆಲ್ಲೆಡೆ ‍ಪ್ರಸ್ತುತಪಡಿಸುತ್ತಿದ್ದಾರೆ. ಟಿಕೆಟ್‌ಗಳು BookMyShow.com ನಲ್ಲಿ ಲಭ್ಯ.

ಸ್ಥಳ: ಫೀನಿಕ್ಸ್‌ ಮಾರ್ಕೆಟ್‌ ಸಿಟಿ, ವೈಟ್‌ಫೀಲ್ಡ್‌ ಮುಖ್ಯರಸ್ತೆ, ಮಹದೇವಪುರ 

ಸಮಯ: ಶನಿವಾರ ಮತ್ತು ಭಾನುವಾರ ಸಂಜೆ 6.

 

 

ಪ್ರತಿಕ್ರಿಯಿಸಿ (+)