ಭಾನುವಾರ, ಡಿಸೆಂಬರ್ 15, 2019
26 °C

ಕೋಲಾರ: ಯುನಿಲೆಟ್‌ ಮಳಿಗೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ನಗರದ ಎಂ.ಬಿ.ರಸ್ತೆಯಲ್ಲಿ ಯುನಿಲೆಟ್‌ ಎಲೆಕ್ಟ್ರಾನಿಕ್ಸ್‌ ಉತ್ಪನ್ನ ಮಾರಾಟ ಮಳಿಗೆಯು ಶುಕ್ರವಾರ ಕಾರ್ಯಾರಂಭ ಮಾಡಿತು.

ರಾಜ್ಯದ ರಾಜಧಾನಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಯುನಿಲೆಟ್‌ ಅಪ್ಲೇಯನ್ಸೆಸ್‌ ಪ್ರೈವೇಟ್‌ ಲಿಮಿಟೆಡ್‌ನ 44 ಮಳಿಗೆಗಳಿವೆ. ಬೆಂಗಳೂರು ನಗರವೊಂದರಲ್ಲೇ 39 ಮಳಿಗೆಗಳಿವೆ. ಉಳಿದಂತೆ ಮೈಸೂರಿನಲ್ಲಿ 3, ತುಮಕೂರು ಹಾಗೂ ರಾಮನಗರ ಜಿಲ್ಲಾ ಕೇಂದ್ರದಲ್ಲಿ ತಲಾ 1 ಮಳಿಗೆಗಳಿವೆ. ಯುನಿಲೆಟ್‌ನ 45ನೇ ಮಳಿಗೆ ಜಿಲ್ಲಾ ಕೇಂದ್ರದಲ್ಲಿ ಉದ್ಘಾಟನೆಯಾಯಿತು.

ಮಳಿಗೆ ಆರಂಭದ ಮೊದಲ ದಿನವಾದ ಹಿನ್ನೆಲೆಯಲ್ಲಿ ಟಿ.ವಿ, ಫ್ರಿಡ್ಜ್‌, ವಾಷಿಂಗ್‌ ಮಷಿನ್‌, ಮೊಬೈಲ್‌ ಸೇರಿದಂತೆ ಪ್ರತಿ ಉತ್ಪನ್ನ ಖರೀದಿಗೂ ಮತ್ತೊಂದು ಉತ್ಪನ್ನವನ್ನು ಉಚಿತವಾಗಿ ನೀಡಲಾಯಿತು. ಜತೆಗೆ ವಿಶೇಷ ರಿಯಾಯಿತಿ, ಶೇ 15ರಷ್ಟು ಕ್ಯಾಷ್‌ ಬ್ಯಾಕ್‌ ಕೊಡುಗೆ, ಪ್ರತಿ ₹ 2 ಸಾವಿರದ ಖರೀದಿಗೆ ಬಹುಮಾನ ಸ್ಪರ್ಧೆಯ ಕೂಪನ್‌ ನೀಡಲಾಯಿತು. ಹೀಗಾಗಿ ಗ್ರಾಹಕರು ಖರೀದಿಗೆ ಮುಗಿಬಿದ್ದರು. ಮಳಿಗೆಯು ಗ್ರಾಹಕರಿಂದ ತುಂಬಿ ಹೋಗಿತ್ತು.

‘ವರ್ಷದ 365 ದಿನವೂ ಮಳಿಗೆ ತೆರೆದಿರುತ್ತದೆ. ಪ್ರತಿನಿತ್ಯ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9.30ರವರೆಗೆ ವಹಿವಾಟು ನಡೆಯುತ್ತದೆ. ಡಿ.14ರವರೆಗೆ ಪ್ರತಿ ಉತ್ಪನ್ನ ಖರೀದಿಗೆ ಮತ್ತೊಂದು ಉತ್ಪನ್ನ ಉಚಿತವಾಗಿ ನೀಡಲಾಗುತ್ತದೆ. ವರ್ಷವಿಡೀ ರಿಯಾಯಿತಿ ಮತ್ತು ಕ್ಯಾಷ್‌ ಬ್ಯಾಕ್‌ ಸೇವೆ ಲಭ್ಯವಿದೆ’ ಎಂದು ಯುನಿಲೆಟ್‌ ಅಪ್ಲೇಯನ್ಸೆಸ್‌ ಪ್ರೈವೇಟ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಹೂಮಾಯುನ್‌ ಫಯಾಜ್‌ ಸುದ್ದಿಗಾರರಿಗೆ ತಿಳಿಸಿದರು.

ನಗರಸಭೆ 22ನೇ ವಾರ್ಡ್‌ ಸದಸ್ಯೆ ಹರ್ಷಿಯಾ ಸುಲ್ತಾನ್‌, ಯುನಿಲೆಟ್‌ ಅಪ್ಲೇಯನ್ಸೆಸ್‌ ಪ್ರೈವೇಟ್‌ ಲಿಮಿಟೆಡ್‌ನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಕೆ.ಟಿ.ಮುರಳಿ, ಕೆ.ಪಿ.ಚಂದ್ರಶೇಖರ್‌ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು