ಡಿ.12, 13ರಂದು ಸಿಎ ವಿದ್ಯಾರ್ಥಿಗಳ ಸಮ್ಮೇಳನ

7

ಡಿ.12, 13ರಂದು ಸಿಎ ವಿದ್ಯಾರ್ಥಿಗಳ ಸಮ್ಮೇಳನ

Published:
Updated:

ಮಂಗಳೂರು: ಭಾರತೀಯ ಲೆಕ್ಕ ಪರಿಶೋಧಕರ ಸಂಘದ (ಐಸಿಎಐ) ಅಂಗ ಸಂಸ್ಥೆಯಾಗಿರುವ ದಕ್ಷಿಣ ಭಾರತ ಲೆಕ್ಕ ಪರಿಶೋಧನಾ ವಿದ್ಐಆರ್ಥಿಗಳ ಸಂಘದ (ಸಿಕಾಸ) ಮಂಗಳೂರು ಶಾಖೆಯ ನೇತೃತ್ವದಲ್ಲಿ ಇದೇ ಬುಧವಾರ ಮತ್ತು ಗುರುವಾರ ನಗರದ ಪುರಭವನದಲ್ಲಿ ‘ವಿದ್ವತ್‌’ ಲೆಕ್ಕ ಪರಿಶೋಧನಾ (ಸಿಎ) ವಿದ್ಯಾರ್ಥಿಗಳ ಸಮ್ಮೇಳನ ನಡೆಯಲಿದೆ.

ಶನಿವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಐಸಿಎಐ ಮಂಗಳೂರು ಶಾಖೆಯ ಅಧ್ಯಕ್ಷ ಶಿವಾನಂದ ಪೈ, ‘ಎರಡು ದಿನಗಳ ಈ ಸಮ್ಮೇಳನದಲ್ಲಿ 1,000ಕ್ಕೂ ಹೆಚ್ಚು ಸಿಎ ವಿದ್ಯಾರ್ಥಿಗಳು ಪಾಲ್ಗೊಳ್ಳುವರು. ಬುಧವಾರ ಬೆಳಿಗ್ಗೆ 9 ಗಂಟೆಗೆ ಐಸಿಎಐ ನಿಕಟಪೂರ್ವ ಅಧ್ಯಕ್ಷ ಜಿ.ರಾಮಸ್ವಾಮಿ ಸಮ್ಮೇಳನ ಉದ್ಘಾಟಿಸುವರು. ಎರಡು ದಿನಗಳ ಕಾಲ ಆರು ಗೋಷ್ಠಿಗಳು ನಡೆಯಲಿವೆ’ ಎಂದರು.

ಸಿಎ ಪರೀಕ್ಷೆ ಎದುರಿಸುವುದು, ಕೃತಕ ಬುದ್ಧಿಮತ್ತೆ ಮತ್ತು ಲೆಕ್ಕ ಪರಿಶೋಧನೆ, ತೆರಿಗೆ ಕಾಯ್ದೆಗಳು, ಸರಕು ಮತ್ತು ಸೇವಾ ತೆರಿಗೆ ಸೇರಿಗೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಲಿದೆ. ಪ್ರಸಿದ್ಧ ಲೆಕ್ಕಪರಿಶೋಧಕರು ವಿಚಾರ ಮಂಡಿಸುವರು. ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಟ್ಯಾಲೆಂಟ್‌ ಸರ್ಚ್‌: ಸಿಕಾಸ ಮುಖ್ಯಸ್ಥ ಅಬ್ದುರ್ ರೆಹಮಾನ್‌ ಮುಸ್ಬ ಮಾತನಾಡಿ, ‘ಐಸಿಎಐ ಕಾಮರ್ಸ್ ವಿಝಾರ್ಡ್‌– 2018 ಅಂಗವಾಗಿ ವಾಣಿಜ್ಯಶಾಸ್ತ್ರದಲ್ಲಿನ ಪ್ರತಿಭೆಗಳನ್ನು ಗುರುತಿಸಲು ರಾಷ್ಟ್ರ ಮಟ್ಟದಲ್ಲಿ ‘ಟ್ಯಾಲೆಂಟ್‌ ಸರ್ಚ್‌’ ಸ್ಪರ್ಧೆ ಆಯೋಜಿಸಲಾಗಿದೆ. ಒಂಬತ್ತನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳು ಮತ್ತು ಬಿ.ಕಾಂ, ಬಿಬಿಎ, ಬಿಎಂಎಸ್‌ ಮತ್ತು ಸಂಬಂಧಿತ ಕೋರ್ಸ್‌ಗಳ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಅವಕಾಶವಿದೆ’ ಎಂದರು.

ಡಿಸೆಂಬರ್‌ 31ರವರೆಗೆ ₹ 100 ನೋಂದಣಿ ಶುಲ್ಕ ಪಾವತಿಸಿ ನೋಂದಣಿ ಮಾಡಿಸಿಕೊಳ್ಳಬಹುದು. ಡಿ.31ರಿಂದ ಜನವರಿ 15ರವರೆಗೆ  ನೋಂದಣಿ ಶುಲ್ಕ ₹ 150 ಇರಲಿದೆ. ಜನವರಿ 6ರಂದು ಮೊದಲನೇ ಹಂತದ ಆನ್‌ಲೈನ್‌ ಪರೀಕ್ಷೆ ಮತ್ತು ಜ.20ರಂದು ಆನ್‌ಲೈನ್‌ ಅಥವಾ ಪೆನ್‌, ಪೆನ್ಸಿಲ್‌ ವಿಧಾನದಲ್ಲಿ ಅಂತಿಮ ಪರೀಕ್ಷೆ ನಡೆಯಲಿದೆ. ಜನವರಿ ಅಂತ್ಯ ಅಥವಾ ಫೆಬ್ರುವರಿಯಲ್ಲಿ ಫಲಿತಾಂಶ ಪ್ರಕಟಿಸಿ, ಬಹುಮಾನ ವಿತರಿಸಲಾಗುವುದು. ರಾಷ್ಟ್ರ ಮಟ್ಟದಲ್ಲಿ ಪ್ರಥಮ ರ‍್ಯಾಂಕ್‌ ಗಳಿಸುವ ವಿದ್ಯಾರ್ಥಿಗೆ ₹ 1 ಲಕ್ಷ ಬಹುಮಾನ ದೊರೆಯಲಿದೆ ಎಂದು ತಿಳಿಸಿದರು.

ಐಸುಎಐ ಮಂಗಳೂರು ಶಾಖೆಯ ಕಾರ್ಯದರ್ಶಿ ರವಿರಾಜ ಬೈಕಂಪಾಡಿ, ಸಿಕಾಸ ಉಪಾಧ್ಯಕ್ಷೆ ಅನೀಶಾ ಲೋಬೊ, ಕಾರ್ಯದರ್ಶಿ ರಜತ್‌ ಪ್ರಭು ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !