ಮಂಡ್ಯ ಬಸ್‌ ದುರಂತ: ಚಾಲಕನ ಬಂಧನ

7

ಮಂಡ್ಯ ಬಸ್‌ ದುರಂತ: ಚಾಲಕನ ಬಂಧನ

Published:
Updated:

ಮಂಡ್ಯ: ಕನಗನಮರಡಿ ಬಸ್‌ ದುರಂತದಲ್ಲಿ 30 ಜನರ ಸಾವಿಗೆ ಕಾರಣನಾದ ಚಾಲಕನನ್ನು ಪಾಂಡವಪುರ ಪೊಲೀಸರು ಶನಿವಾರ ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದ ಆತ ಘಟನೆ ನಡೆದ 15 ದಿನಗಳ ನಂತರ ಪತ್ತೆಯಾಗಿದ್ದಾನೆ.

ಬಸರಾಳು ಗ್ರಾಮದ ಶಿವಣ್ಣ ಬಂಧಿತ ಬಸ್‌ ಚಾಲಕ. ನ.24ರಂದು ನಡೆದ ಘಟನೆಯಲ್ಲಿ ಚಾಲಕ, ನಿರ್ವಾಹಕ ಸೇರಿ ನಾಲ್ವರು ಮಾತ್ರ ಬದುಕುಳಿದಿದ್ದರು. 30 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ದುರಂತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವರದಿ ನೀಡಿದ್ದರು.

ಚಾಲಕನ ಬಂಧನಕ್ಕಾಗಿ ಪೊಲೀಸರ ಎರಡು ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಆತನನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !