ಗೌತಮ್ ಗಂಭೀರ್‌ಗೆ ಬೀಳ್ಕೊಡುಗೆ

7

ಗೌತಮ್ ಗಂಭೀರ್‌ಗೆ ಬೀಳ್ಕೊಡುಗೆ

Published:
Updated:

ನವದೆಹಲಿ: ಕ್ರಿಕೆಟ್‌ನ ಎಲ್ಲ ಮಾದರಿಗಳಿಗೂ ವಿದಾಯ ಹೇಳಿದ ದೆಹಲಿ ತಂಡದ ಆಟಗಾರ ಗೌತಮ್‌ ಗಂಭೀರ್   ಅವರಿಗೆ ಭಾನುವಾರ ಫಿರೋಜ್ ಶಾ ಕೋಟ್ಲಾ ಅಂಗಳದಲ್ಲಿ ಸತ್ಕರಿಸಲಾಯಿತು.

ಆಂಧ್ರ‍ಪ್ರದೇಶ ಎದುರು ಇಲ್ಲಿ ನಡೆದ ರಣಜಿ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಗೌತಮ್ ಶತಕ ಬಾರಿಸಿದ್ದರು. ಭಾರತ ಕ್ರಿಕೆಟ್‌ ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಹಲವು ಮಹತ್ವದ ಕಾಣಿಕೆ ನೀಡಿದವರು ಗೌತಮ್.  ಬಾಲ್ಯದಲ್ಲಿ ಕ್ರಿಕೆಟ್‌ ಜೀವನ ಆರಂಭವಾದ ಫಿರೋಜ್ ಶಾ ಕೋಟ್ಲಾದಲ್ಲಿಯೇ ಅವರು ನಿವೃತ್ತಿ ಪಡೆದಿದ್ದು ವಿಶೇಷ. ಈ ಸಂದರ್ಭಧಲ್ಲಿ ಡಿಡಿಸಿಎ ಪದಾಧಿಕಾರಿಳಾಗದ ರಜತ್ ಶರ್ಮಾ ಮತ್ತಿತರರು ಗಂಭೀರ್ ಅವರನ್ನು ಸನ್ಮಾನಿಸಿದರು. ಗಂಭೀರ್ ಪತ್ನಿ ನತಾಶಾ ಜೈನ್ ಮತ್ತು ಇಬ್ಬರು ಪುತ್ರಿಯರು ಈ ಸಂದರ್ಭದಲ್ಲಿ ಹಾಜರಿದ್ದರು. ನೂರಾರು ಅಭಿಮಾನಿಗಳು ಸೇರಿದ್ದರು.

ಸಂಕ್ಷಿಪ್ತ ಸ್ಕೋರು:  ಆಂಧ್ರಪ್ರದೇಶ 390 ಮತ್ತು 130; ನವದೆಹಲಿ: 433 ಮತ್ತು 5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 41 (ಅನುಜ್ ರಾವತ್ 23, ಲಲಿತರ್ ಯಾದವ್ ಔಟಾಗದೆ 13) ಫಲಿತಾಂಶ : ಡ್ರಾ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !