ಶನಿವಾರ, ಡಿಸೆಂಬರ್ 7, 2019
24 °C

2019ರ ‘ಪ್ರಜಾವಾಣಿ’ ಕ್ಯಾಲೆಂಡರ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮಂಡ್ಯ: ‘ಪ್ರಜಾವಾಣಿ ಪತ್ರಿಕೆ ಹೊರತಂದಿರುವ 2019ರ ಕ್ಯಾಲೆಂಡರ್‌ ಬಹಳ ವಿಶೇಷವಾಗಿದೆ. ಪತ್ರಿಕೆಗೆ 70 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಕ್ಯಾಲೆಂಡರ್‌ ಹೊಸ ವಿನ್ಯಾಸದೊಂದಿಗೆ ಮೂಡಿಬಂದಿದೆ’ ಎಂದು ಜಿಲ್ಲಾ ಪಂಚಾಯಿಸಿ ಸಿಇಒ ಕೆ.ಯಾಲಕ್ಕಿಗೌಡ ಹೇಳಿದರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನೂತನ ವರ್ಷದ ಕ್ಯಾಲೆಂಡರ್‌ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಕಳೆದ 50 ವರ್ಷಗಳಿಂದ ನಮ್ಮ ಮನೆಗೆ ಪ್ರಜಾವಾಣಿ ಪತ್ರಿಕೆ ಬರುತ್ತಿದೆ. ವಿದ್ಯಾರ್ಥಿಗಳು, ಅಧಿಕಾರಿಗಳಿಗೆ ಪತ್ರಿಕೆ ಬಹಳ ಉಪಯುಕ್ತ ಮಾಹಿತಿ ನೀಡುತ್ತದೆ. ಸಮೂಹ ಮಾಧ್ಯಮಗಳ ಯುಗದಲ್ಲಿ ಈಗಲೂ ಪತ್ರಿಕೆ ತನ್ನ ಬದ್ಧತೆ ಉಳಿಸಿಕೊಂಡಿದೆ. ನಿಸ್ಪಕ್ಷಪಾತ ಸುದ್ದಿಗಳಿಗೆ ಜನರು ಪ್ರಜಾವಾಣಿಯನ್ನೇ ಓದುತ್ತಾರೆ. ಪತ್ರಿಕೆ ಹೊರತರುತ್ತಿರುವ ಪ್ರತಿ ವರ್ಷದ ಕ್ಯಾಲೆಂಡರ್‌ ವಿಭಿನ್ನವಾಗಿರುತ್ತದೆ. ಕ್ಯಾಲೆಂಡರ್‌ ಬಣ್ಣ ಬಹಳ ಆಪ್ತವಾಗಿದೆ. ಮನೆ, ಕಚೇರಿಗಳ ಗೋಡೆ ಮೇಲೆ ಈ ಕ್ಯಾಲೆಂಡರ್‌ ಇರಬೇಕು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಧನುಷ್‌, ಯೋಜನಾ ನಿರ್ದೇಶಕ ಗಣಪತಿನಾಯಕ್‌, ಮುಖ್ಯ ಲೆಕ್ಕಾಧಿಕಾರಿ ಪಿ.ರವಿಕುಮಾರ್‌ ಇದ್ದರು.

ನೂತನ ವರ್ಷದ ಕ್ಯಾಲೆಂಡರ್‌ ಬೇಕಿದ್ದಲ್ಲಿ ಪ್ರಜಾವಾಣಿ ಪ್ರಸರಣ ವಿಭಾಗದ ಜಿಲ್ಲಾ ಪ್ರತಿನಿಧಿ ಎಲ್‌.ಎಸ್‌.ಮಹೇಶ್ (9606912162) ಅವರನ್ನು ಸಂಪರ್ಕಿಸಬಹುದು. ಬಿಡಿ ಹಾಗೂ ಸಗಟು ಕ್ಯಾಲೆಂಡರ್‌ಗಳು ಸಿಗುತ್ತವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು