ಹೊಟ್ಟೆಯಲ್ಲಿದ್ದ 7 ಕೆಜಿ ಗೆಡ್ಡೆ ಹೊರತೆಗೆದ ವೈದ್ಯರು

7

ಹೊಟ್ಟೆಯಲ್ಲಿದ್ದ 7 ಕೆಜಿ ಗೆಡ್ಡೆ ಹೊರತೆಗೆದ ವೈದ್ಯರು

Published:
Updated:
Deccan Herald

ಚಾಮರಾಜನಗರ: ಮಹಿಳೆಯೊಬ್ಬರ ಅಂಡಾಶಯದಲ್ಲಿ ಬೆಳೆದಿದ್ದ 7 ಕೆ.ಜಿ ತೂಕದ ಗೆಡ್ಡೆಯನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ನವೀನ್‌ಚಂದ್ರ ಅವರು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಯಳಂದೂರು ತಾಲ್ಲೂಕಿನ ಅವಲ್‌ ಕಂದಹಳ್ಳಿ(ಎ.ಕಂದಹಳ್ಳಿ)ಯ ಮಹದೇವಮ್ಮ (55) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರತಿದಿನ ಕಾಡುತ್ತಿದ್ದ ನೋವಿನಿಂದ ಮುಕ್ತಿ ಹೊಂದಿ ಆರೋಗ್ಯವಾಗಿದ್ದಾರೆ.

ಗೆಡ್ಡೆಗೆ ಹಾನಿಯಾಗದಂತೆ ಮತ್ತು ರಕ್ತಸ್ರಾವ ಆಗದಂತೆ ಅತ್ಯಂತ ಸುರಕ್ಷಿತ ರೀತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡುವುದು ಕಷ್ಟ. ಇದನ್ನು ನಿರ್ವಹಿಸುವುದು ಸಾಮಾನ್ಯ. ಜಾಗರೂಕತೆ ಮತ್ತು ತಾಳ್ಮೆಯಿಂದ ಸುಮಾರು ಅರ್ಧಗಂಟೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ, ಗೆಡ್ಡೆಯನ್ನು ಹೊರತೆಗೆಯಲಾಯಿತು ಎನ್ನುತ್ತಾರೆ ವೈದ್ಯರು. ಶಸ್ತ್ರ ಚಿಕಿತ್ಸೆ ವೇಳೆ ಅರಿವಳಿಕೆ ತಜ್ಞ ಡಾ. ಮಹೇಶ್, ಪದ್ಮ ತಂಡದಲ್ಲಿದ್ದರು.
 

Tags: 

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !