ಶನಿವಾರ, ಮಾರ್ಚ್ 6, 2021
21 °C
40 ಎಕರೆ ಕೃಷಿ ಪ್ರದೇಶ ಜಲಾವೃತ l ಪರಿಹಾರಕ್ಕೆ ಒತ್ತಾಯ

ಎನ್‌ಆರ್‌ಬಿಸಿ ಕಾಲುವೆ ಒಡೆದು ಅಪಾರ ಬೆಳೆಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ರಾಯಚೂರು: ದೇವದುರ್ಗ ತಾಲ್ಲೂಕಿನ ಸುಂಕೇಶ್ವರಹಾಳ ಸಮೀಪ ಸೋಮವಾರ ನಾರಾಯಣಪುರ ಬಲದಂಡೆ ಕಾಲುವೆ (ಎನ್‌ಆರ್‌ಬಿಸಿ) ಒಡೆದು ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ.

ಎನ್‌ಆರ್‌ಟಿಸಿಯ 35ನೇ ಕಿಲೊ ಮೀಟರ್‌ ಉಪಕಾಲುವೆ ಆಲ್ದರ್ತಿ ಹಾಗೂ 94 ಕಿಲೊ ಮೀಟರ್‌ ಸಮೀಪದ ಜಾಗರಜಾಡಲದಿನ್ನಿ ಬಳಿ ಒಡೆದಿದೆ. ಇದರಿಂದ 40 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿದ್ದ ಭತ್ತದ ಬೆಳೆಯಲ್ಲಿ ನೀರು ನಿಂತಿದೆ. ಆಲ್ದರ್ತಿ, ಜಾಗರಜಾಡಲ
ದಿನ್ನಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಕೊಚ್ಚಿಹೋಗಿ ವಾಹನಗಳ ಸಂಪರ್ಕ ಕಡಿತವಾಗಿದೆ.

ಮಧ್ಯಾಹ್ನದವರೆಗೂ ಅಧಿಕಾರಿಗಳು ಬಾರದೆ ಇರುವುದಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿ, ಬೆಳೆಹಾನಿಗೆ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ಈಗ ಕೇವಲ ಒಂದೂವರೆ ಅಡಿಯಷ್ಟು ನೀರನ್ನು ಕಾಲುವೆಗೆ ಬಿಡಲಾಗಿದೆ. ಒತ್ತಡಕ್ಕೆ ಸುಮಾರು 40 ಅಡಿಗಳಷ್ಟು  ಕೊಚ್ಚಿಹೋಗಿದೆ’ ಎಂದು ಎಂಜಿನಿಯರ್‌ಗಳು ತಿಳಿಸಿದ್ದಾರೆ.

‘ಕಾಲುವೆ ದುರಸ್ತಿಗೆ ಎನ್‌ಆರ್‌ಬಿಸಿ ಎಂಜಿನಿಯರ್‌ಗಳು ಸಿದ್ಧರಾಗಿದ್ದು, ತ್ವರಿತವಾಗಿ ಕೆಲಸ ಮಾಡಲಿದ್ದಾರೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು