ಬುಧವಾರ, ಡಿಸೆಂಬರ್ 11, 2019
20 °C

ಆರೋಗ್ಯ ತಪಾಸಣೆ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಹೆಲ್ಪೇಜ್ ಇಂಡಿಯಾ, ಅರಿಸ್ಪಾ ಗ್ಲೋಬ್ ಐ ಫೌಂಡೇಷನ್ ಡೆಂಟಲ್ ಸೈನ್ಸಸ್ ಅಪೋಲೊ ಮೆಡಿಸನ್ ನೆಟ್ವರ್ಕಿಂಗ್ ಫೌಂಡೇಷನ್ ಮಾರತ್‌ಹಳ್ಳಿ ವತಿಯಿಂದ ಕೆ.ಆರ್.ಪುರ ಸಮೀಪದ ರಾಮಮೂರ್ತಿ ನಗರದ ಆಟದ ಮೈದಾನದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.

ಶಿಬಿರವನ್ನು ಉದ್ಘಾಟಿಸಿದ ಬಿಜೆಪಿ ರೈತ ಮೋರ್ಚಾ ಸಂಚಾಲಕ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಡಾ.ಎಚ್.ಎಂ.ಚಂದ್ರಶೇಖರ್, ‘ವ್ಯಕ್ತಿಯು ಆರೋಗ್ಯದಿಂದ ಇದ್ದರೆ ಸಾಧನೆಗೆ ಪ್ರೇರಣೆಯಾಗುತ್ತದೆ. ಇಂಥ ಶಿಬಿರಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು’ ಎಂದರು.

ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ, ದಂತ ತಪಾಸಣೆ, ಕಿವಿ ಮೂಗು ಗಂಟಲು ತಪಾಸಣೆ, ಚರ್ಮರೋಗ ತಪಾಸಣೆ, ಮಧುಮೇಹ, ಹೃದಯ ಸಂಬಂಧಿತ ಕಾಯಿಲೆಗಳು, ಸ್ತ್ರೀ ರೋಗಗಳ ತಪಾಸಣೆ ನಡೆಯಿತು. 400ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. 40 ಜನ ವೈದ್ಯರ ತಂಡ ಆರೋಗ್ಯ ತಪಾಸಣೆ ನಡೆಸಿತು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು