ಸೆಲ್ಫಿ ತೆಗೆದುಕೊಳ್ಳುವಾಗ ಅಡ್ಡಬಂದಿದ್ದಕ್ಕೆ ಹಲ್ಲೆ

7

ಸೆಲ್ಫಿ ತೆಗೆದುಕೊಳ್ಳುವಾಗ ಅಡ್ಡಬಂದಿದ್ದಕ್ಕೆ ಹಲ್ಲೆ

Published:
Updated:

ಬೆಂಗಳೂರು: ಸೆಲ್ಫಿ ತೆಗೆದುಕೊಳ್ಳುವಾಗ ಅಡ್ಡ ಬಂದ ಎಂಬ ಕಾರಣಕ್ಕೆ ಬಾಲಕರ ಗುಂಪೊಂದು ಮಾಸ್‌ಖಾನ್ (15) ಎಂಬಾತನ ಮೇಲೆ ಹಲ್ಲೆ ಮಾಡಿದ್ದು, ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಥಣಿಸಂದ್ರ ನಿವಾಸಿ ಮಾಸ್‌ಖಾನ್, ಸಹೋದರ ಜಬ್ಬಿಖಾನ್ ಜತೆ ಡಿ. 1ರಂದು ಅಕ್ಕಯಮ್ಮನ ಬೆಟ್ಟಕ್ಕೆ ಹೋಗಿದ್ದರು. ಅದೇ ಬೆಟ್ಟಕ್ಕೆ ನಾಲ್ವರು ಬಾಲಕರ ಗುಂಪು ಬಂದಿತ್ತು. ಸಂಜೆ 4.30ರ ಸುಮಾರಿಗೆ ಗುಂಪಿನವರು ಸೆಲ್ಫಿ ತೆಗೆದುಕೊಳ್ಳುವಾಗ, ಮಾಸ್‌ಖಾನ್ ಅಡ್ಡ ಹೋಗಿದ್ದ’ ಎಂದು ಪೊಲೀಸರು ಹೇಳಿದರು.

‘ಅಷ್ಟಕ್ಕೆ ಕೋಪಗೊಂಡ ಗುಂಪು, ಮಾಸ್‌ಖಾನ್‌ ಮೇಲೆ ಹಲ್ಲೆ ಮಾಡಿದೆ. ರಕ್ಷಣೆಗೆ ಹೋದ ಸಹೋದರನಿಗೆ ಥಳಿಸಿ ಪರಾರಿಯಾಗಿದೆ. ತಲೆಮರೆಸಿಕೊಂಡಿರುವ ಬಾಲಕರ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಬೇಕಿದೆ’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !