ಶುಕ್ರವಾರ, ಡಿಸೆಂಬರ್ 6, 2019
19 °C

ಆರ್ಥಿಕತೆಗೆ ಹೊಡೆತ:ಮನಮೋಹನ್‌ಸಿಂಗ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಹುದ್ದೆಗೆ ಉರ್ಜಿತ್‌ ಪಟೇಲ್ ದಿಢೀರ್‌ ರಾಜೀನಾಮೆ ನೀಡಿರುವುದು ದುರದೃಷ್ಟ
ಕರ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರ ರಾಜೀನಾಮೆಯಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿಗೆ ತೀವ್ರ ಹೊಡೆತ ಬಿದ್ದಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ‘ವಿಷ’ ಸೇವಿಸದ ಸ್ವತಂತ್ರ ಧೋರಣೆಯ ಮಿತಭಾಷಿ

‘ಭಾರತದ ಆರ್ಥಿಕತೆಯ ಅಡಿಪಾಯವಾಗಿರುವ ಆರ್‌ಬಿಐನಂತಹ ಸಂಸ್ಥೆಯನ್ನು ಹಾಳು ಮಾಡಲು ನರೇಂದ್ರ ಮೋದಿ ಸರ್ಕಾರ ಚಾತಕಪಕ್ಷಿಯಂತೆ ಕಾಯುತ್ತಿತ್ತು. ಉರ್ಜಿತ್‌ ದಿಢೀರ್‌ ರಾಜೀನಾಮೆಯಿಂದ ಇದು ಮತ್ತೊಮ್ಮೆ ಸಾಬೀತಾಗಿದೆ’ ಎಂದು ದೂರಿದರು.

‘ಅಲ್ಪಾವಧಿ ರಾಜಕೀಯ ಲಾಭಕ್ಕಾಗಿ, ದೀರ್ಘಾವಧಿ ಪ್ರಯತ್ನದ ಮೂಲಕ ಸ್ಥಾಪಿಸಿದ ಆರ್ಥಿಕ ಸಂಸ್ಥೆಗಳನ್ನು ಹಾಳು ಗೆಡವಲು ಹುನ್ನಾರ ನಡೆಸುತ್ತಿರುವುದು ಮೂರ್ಖತನದ ಕೃತ್ಯ’ ಎಂದು ಅವರು ಟೀಕಿಸಿದ್ದಾರೆ.

ಇದನ್ನೂ ಓದಿಆರ್‌ಬಿಐ ಗವರ್ನರ್ ಹುದ್ದೆಗೆ ಊರ್ಜಿತ್ ಪಟೇಲ್ ರಾಜೀನಾಮೆ 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು