ಸೋಮವಾರ, ಡಿಸೆಂಬರ್ 9, 2019
22 °C

ಗಮನ ಸೆಳೆಯುತ್ತಿದೆ ‘ಗ್ರೇಟ್‌ ಔಟ್‌ಡೋರ್ಸ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಸ್ಕೈ ಡೈವಿಂಗ್‌ನಲ್ಲಿ ಕಾಣುವ ನೆಲಬಯಲು, ಬಿಸಿಗಾಳಿ ಬಲೂನ್‌ನಲ್ಲಿ ಸಾಗುವಾಗ ಕಾಣುವ ಪರ್ವತದ ಸಾಲು ಸೇರಿದಂತೆ ಏರೋ ಸ್ಪೋರ್ಟ್ಸ್‌, ಅಕ್ವಾ ಸ್ಪೋರ್ಟ್ಸ್‌ ಮತ್ತು ವೈಲ್ಡ್‌ ಲೈಫ್‌ ಸಫಾರಿಯ ಅಪರೂಪದ ಚಿತ್ರಗಳು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಭಿತ್ತಿಗಳನ್ನು ಅಲಂಕರಿಸಿವೆ. 

18 ಛಾಯಾಗ್ರಾಹಕರು ತಮ್ಮ ಕ್ಯಾಮೆರಾ ಕಣ್ಣಿನಿಂದ ಸೆರೆಹಿಡಿದಿರುವ 100ಕ್ಕೂ ಹೆಚ್ಚು ಚಿತ್ರಗಳು ಒಂದೇ ಸೂರಿನಡಿ ಕಾಣುವ ಅವಕಾಶ ಇಲ್ಲಿದೆ. 

ಎಸೆನ್‌ ಕಮ್ಯುನಿಕೇಷನ್ಸ್ ನಿರ್ದೇಶಕಿ ಸುಶೀಲಾ ನಾಯರ್‌ ಆಯೋಜಿಸಿರುವ ‘ಸಾಹಸ ಕ್ರೀಡೆ ಮತ್ತು ಪ್ರವಾಸ ಛಾಯಾಚಿತ್ರ ಪ್ರದರ್ಶನ’ದಲ್ಲಿ ಅಪರೂಪದ ಪಟಗಳನ್ನು ನೋಡಬಹುದಾಗಿದೆ. ಪ್ರವಾಸೋದ್ಯಮ ಸಚಿವಾಲಯದ ರಾಜ್ಯ ನಿರ್ದೇಶಕ ಮೊಹಮ್ಮದ್‌ ಫಾರೂಕ್‌ ಪ್ರದರ್ಶನವನ್ನು ಸೋಮವಾರ ಉದ್ಘಾಟಿಸಿದರು.

‘ರಾಜ್ಯದ ಪ್ರವಾಸಿ ತಾಣಗಳ ಅಪರೂಪದ ಚಿತ್ರಗಳನ್ನು ಇಲಾಖೆಯೊಂದಿಗೆ ಹಂಚಿಕೊಳ್ಳಿ. ಆ ಚಿತ್ರಗಳನ್ನು ಬಳಸಿಕೊಂಡು ತಾಣಗಳತ್ತ ಪ್ರವಾಸಿಗರನ್ನು ಸೆಳೆಯುತ್ತೇವೆ. ಪೋಸ್ಟ್‌ ಕಾರ್ಡ್‌ಗಳನ್ನು ರಚಿಸಲು ಬಳಸಿಕೊಳ್ಳುತ್ತೇವೆ’ ಎಂದು ಮೊಹಮ್ಮದ್‌ ಫಾರೂಕ್‌ ಅವರು ಯುವ ಛಾಯಾಗ್ರಾಹಕರಿಗೆ ತಿಳಿಸಿದರು.

‘ಗೋವಾ ಮಾದರಿಯಲ್ಲಿ ಕಾರವಾರದ ಕಡಲ ತೀರವನ್ನು ಅಭಿವೃದ್ಧಿಪಡಿಸಲು ಕ್ರೀಯಾ ಯೋಜನೆ ರೂಪಿಸುತ್ತಿದ್ದೇವೆ. ಇದಕ್ಕೆ ತಜ್ಞರ, ಛಾಯಾಗ್ರಾಹಕರ, ಬರಹಗಾರರ ಸಲಹೆಗಳನ್ನು ಪಡೆಯುತ್ತೇವೆ’ ಎಂದರು. 

ಛಾಯಾಚಿತ್ರ ಪ್ರದರ್ಶನವು ಡಿ.12ರವರೆಗೆ ಇರಲಿದೆ.

ಪ್ರತಿಕ್ರಿಯಿಸಿ (+)