ತಾರತಮ್ಯ ಮೆಟ್ಟಿ ನಿಂತು ವಿಶ್ವ ಮಾನವರಾಗಿ

7

ತಾರತಮ್ಯ ಮೆಟ್ಟಿ ನಿಂತು ವಿಶ್ವ ಮಾನವರಾಗಿ

Published:
Updated:

ಕೋಲಾರ: ‘ಯುವಕ ಯುವತಿಯರು ತಾರತಮ್ಯ ಮೆಟ್ಟಿ ನಿಂತು ವಿಶ್ವ ಮಾನವರಾಗಬೇಕು’ ಎಂದು ರಾಜ್ಯ ರೈತ ಸಂಘ ವಿಭಾಗೀಯ ಕಾರ್ಯದರ್ಶಿ ಯಾಕೂಬ್‌ ಷರೀಫ್‌ ಕಿವಿಮಾತು ಹೇಳಿದರು.

ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಸರ್ಕಾರಿ ಕಾನೂನು ಕಾಲೇಜಿನ ರೆಡ್ ಕ್ರಾಸ್ ಯುವ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಧರ್ಮದ ವಿಚಾರವು ಜನರ ವಿವೇಚನೆಗೆ ಬಿಟ್ಟದ್ದು. ಜಾತಿ, ಧರ್ಮ, ಜನಾಂಗ ಹಾಗೂ ಪ್ರಾಂತೀಯತೆ ಹೆಸರಿನಲ್ಲಿ ತಾರತಮ್ಯ ಮಾಡಬಾರದು’ ಎಂದರು.

‘ಜಾಗತಿಕವಾಗಿ ಶೇ 7ರಷ್ಟು ನಾಸ್ತಿಕರಿದ್ದಾರೆ. ನಾಗರೀಕತೆಯ ಜತೆಜತೆಯಲ್ಲೇ ಮಾನವ ಹಕ್ಕುಗಳ ಕಲ್ಪನೆ ಆರಂಭವಾಯಿತು. ಸಮಾಜದಲ್ಲಿ ಮನುಷ್ಯರನ್ನು ಬದುಕಲು ಬಿಡಬೇಕು. ಬೇರೆಯವರ ಭಾವನೆಗಳಿಗೂ ಸ್ಪಂದಿಸಬೇಕು. ಎಲ್ಲರೂ ಸ್ವತಂತ್ರ ಜೀವಿಗಳು. ಹೀಗಾಗಿ ಸಂವಿಧಾನಾತ್ಮಕ ಹಕ್ಕುಗಳನ್ನು ಅನುಭವಿಸಲು ಅವಕಾಶ ಮಾಡಿಕೊಡಬೇಕು’ ಎಂದು ತಿಳಿಸಿದರು.

‘ಮಾನವ ಹಕ್ಕುಗಳು ಬದುಕಿಗೆ ಅಭಿವೃದ್ಧಿಯ ಹಾದಿ ತೋರುವ ಮೂಲಕ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಬದುಕಿಗೆ ಮಾನವ ಹಕ್ಕುಗಳು ಅತ್ಯಗತ್ಯ’ ಎಂದು ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಅನಿತಾ ಅಭಿಪ್ರಾಯಪಟ್ಟರು.

ಸರ್ಕಾರಿ ಕಾನೂನು ಕಾಲೇಜು ಪ್ರಾಧ್ಯಾಪಕಿ ಕೆ.ಪ್ರಸನ್ನಕುಮಾರಿ, ರಾಷ್ಟ್ರೀಯ ಸೇವಾ ಯೋಜನೆ ಸಂಚಾಲಕ ಸುಮಂತ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !