ಧೋನಿ ದೇಶದ ಹೀರೊ: ರಿಷಭ್ ಪಂತ್ ಬಣ್ಣನೆ

7

ಧೋನಿ ದೇಶದ ಹೀರೊ: ರಿಷಭ್ ಪಂತ್ ಬಣ್ಣನೆ

Published:
Updated:

ಪರ್ತ್‌: ಮಹೇಂದ್ರಸಿಂಗ್ ಧೋನಿ ಅವರು ದೇಶದ ಹೀರೊ ಎಂದು ಭಾರತ ಕ್ರಿಕೆಟ್ ತಂಡದ ವಿಕೆಟ್‌ಕೀಪರ್ ರಿಷಭ್ ಪಂತ್ ಬಣ್ಣಿಸಿದ್ದಾರೆ.

ಅಡಿಲೇಡ್‌ನಲ್ಲಿ ಸೋಮವಾರ ಮುಕ್ತಾಯವಾದ ಬಾರ್ಡರ್‌ –ಗಾವಸ್ಕರ್ ಟ್ರೋಫಿ ಟೂರ್ನಿಯ ಮೊದಲ ಟೆಸ್ಟ್‌ನಲ್ಲಿ 11 ಕ್ಯಾಚ್ ಪಡೆದು ದಾಖಲೆ ಬರೆದ ರಿಷಭ್ ಮಂಗಳವಾರ ಕ್ರಿಕೆಟ್‌ ಡಾಟ್‌ಕಾಮ್ ಎಯು ವೆಬ್‌ಸೈಟ್‌ನೊಂದಿಗೆ ಮಾತನಾಡಿದರು.

‘ಒತ್ತಡದ ಸ್ಥಿತಿಯನ್ನು ನಿಭಾಯಿಸುವ ಕಲೆ ಮತ್ತು ತಾಳ್ಮೆಯಿಂದ ಆಡುವುದನ್ನು ಧೋನಿ ನನಗೆ ಕಲಿಸಿದ್ದಾರೆ. ಅವರೊಂದಿಗೆ ಭೇಟಿಯಾಗುವ ಮತ್ತು ಒಡನಾಡುವ ಸಂದರ್ಭಗಳು ಬಂದಾಗಲೆಲ್ಲ ಬಹಳ ವಿಷಯಗಳನ್ನು ಕಲಿತಿದ್ದೇನೆ. ಅವರ ಮಾರ್ಗದರ್ಶನದಿಂದಾಗಿ ನನ್ನ ಆತ್ಮವಿಶ್ವಾಸ ಹೆಚ್ಚಿದೆ. ಯಾವಾಗ ಬೇಕಾದರೂ ನನ್ನ ಸಮಸ್ಯೆಯ ಬಗ್ಗೆ ಅವರೊಂದಿಗೆ ಮಾತನಾಡುತ್ತೇನೆ. ಖಚಿತವಾಗಿ ಪರಿಹಾರ ಸಿಕ್ಕೇ ಸಿಗುತ್ತದೆ. ಅದು ನನ್ನ ಆಟವನ್ನು ಉತ್ಕೃಷ್ಠಗೊಳಿಸುತ್ತಿದೆ’ ಎಂದು ಪಂತ್ ಹೇಳಿದ್ದಾರೆ.

‘ನಾನು ದಾಖಲೆಯ ಬಗ್ಗೆ ಯೋಚಿಸಿಯೇ ಇರಲಿಲ್ಲ. ನನ್ನ ಖಾತೆಯಲ್ಲಿ ಕ್ಯಾಚ್‌ಗಳ ಸಂಖ್ಯೆ ಹೆಚ್ಚಾಗಿರುವುದು ಸಂತಸ ತಂದಿದೆ. ದಾಖಲೆ ರಚನೆಯಾಗಿರುವುದು ಖುಷಿ ಕೊಟ್ಟಿದೆ. ಮತ್ತಷ್ಟು ಸಾಧಿಸುವ ಹುಮ್ಮಸ್ಸು ಹೆಚ್ಚಿಸಿದೆ’ ಎಂದಿದ್ದಾರೆ.

21 ವರ್ಷದ ರಿಷಭ್ ದೆಹಲಿಯವರು. ಅವರು ಒಟ್ಟು ಆರು ಟೆಸ್ಟ್‌ ಪಂದ್ಯಗಳನ್ನು ಆಡಿದ್ಧಾರೆ.

ಪಂತ್ ಸ್ಲೆಡ್ಜಿಂಗ್ ವೈರಲ್: ಕೀಪಿಂಗ್ ಮತ್ತು ಬ್ಯಾಟಿಂಗ್‌ ಎರಡರಲ್ಲೂ ಮಿಂಚುತ್ತಿರುವ ರಿಷಭ್. ಬ್ಯಾಟ್ಸ್‌ಮನ್‌ಗಳನ್ನು ಕೆಣಕುವ ಕಲೆಯನ್ನೂ ಕರಗತ ಮಾಡಿಕೊಳ್ಳುತ್ತಿದ್ಧಾರೆ.

ಅವರು ಸೋಮವಾರ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳನ್ನುಕೆಣಕಿದ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ  ಓಡಾಡುತ್ತಿವೆ.

ಬ್ಯಾಟ್ಸ್‌ಮನ್ ಪ್ಯಾಟ್ ಕಮಿನ್ಸ್‌ ಅವರನ್ನುದ್ದೇಶಿಸಿದ ರಿಷಭ್, ‘ಈಗ ಸಿಕ್ಸರ್‌ಗಳನ್ನು ಹೊಡೆಯುವ ಸಮಯ. ಕೆಟ್ಟ ಎಸೆತ ಬರುತ್ತೆ. ಕಮಾನ್ ಪ್ಯಾಟೀ ಹೊಡಿ’ ಎಂದು ಇಂಗ್ಲಿಷ್‌ನಲ್ಲಿ ಹೇಳುವ ವಿಡಿಯೊವನ್ನು ಬಹಳಷ್ಟು ಜನರು ವೀಕ್ಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !