ಭಾನುವಾರ, ಡಿಸೆಂಬರ್ 15, 2019
23 °C

ವಿರುಷ್ಕಾ ಜೊತೆ ಸಂಭ್ರಮಿಸಿದ ಪೃಥ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಅಡಿಲೇಡ್: ಸೋಮವಾರ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡವು ಸಾಧಿಸಿದ ಗೆಲುವಿನ ಸಂಭ್ರಮವನ್ನು ವಿಶ್ರಾಂತಿಯಲ್ಲಿರುವ ಆಟಗಾರ ಪೃಥ್ವಿ ಶಾ ಹೇಗೆ  ಆಚರಿಸಿದರು ಗೊತ್ತಾ?

ಈಚೆಗೆ ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡಿದ್ದ ಅವರು ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಆದರೆ, ರೋಚಕ ಪಂದ್ಯವನ್ನು ವೀಕ್ಷಿಸಿದ್ದರು. ಸಂಜೆ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ಸಂಭ್ರಮ ಆಚರಿಸಿದರು.ವಿರುಷ್ಕಾ ಜೊತೆಗೆ ಇರುವ ಸೆಲ್ಫಿಯನ್ನು ಪೃಥ್ವಿ ಶಾ ಇನ್ಸ್‌ಟಾ ಗ್ರಾಮ್‌ನಲ್ಲಿ ಹಾಕಿಕೊಂಡಿದ್ದಾರೆ. ವಿರಾಟ್ ದಂಪತಿಗೆ ವಿವಾಹ ವಾರ್ಷಿಕೋತ್ಸವ ಶುಭಾಶಯಗಳನ್ನೂ ಪೃಥ್ವಿ ಮಾಡಿದ್ದಾರೆ.

ಮದುವೆ ವಾರ್ಷಿಕೋತ್ಸವ: ವಿರಾಟ್ ಮತ್ತು  ಅನುಷ್ಕಾ ಅವರ ಮದುವೆಯಾಗಿ ಮಂಗಳವಾರಕ್ಕೆ ಒಂದು ವರ್ಷವಾಯಿತು. ಈ ಸಂದರ್ಭದಲ್ಲಿ ವಿರಾಟ್ ಅವರು ಮಾಡಿದ ಶುಭಾಶಯದ ಟ್ವೀಟ್ ಅಪಾರ ಮೆಚ್ಚುಗೆ ಗಳಿಸಿದೆ.

‘ಮದುವೆಯಾಗಿ ಒಂದು ವರ್ಷ ಕಳೆದಿದೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಿನ್ನೆಯಷ್ಟೇ ಮದುವೆಯಾದಂತಿದೆ. ಕಾಲ ಎಷ್ಟು ಬೇಗ ಉರುಳುತ್ತದೆ ಗೊತ್ತೇ ಆಗುವುದಿಲ್ಲ. ನನ್ನ ಆಪ್ತ ಗೆಳತಿ ಹಾಗೂ ಅರ್ಧಾಂಗಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು’ ಟ್ವೀಟ್ ಮಾಡಿದ್ದಾರೆ.
 

ಪ್ರತಿಕ್ರಿಯಿಸಿ (+)