' ಹಿಂದೂ ಸಮಾಜೋತ್ಸವದ ವಿರುದ್ಧ ಅಪಪ್ರಚಾರ ನಿಲ್ಲಿಸಿ '

7

' ಹಿಂದೂ ಸಮಾಜೋತ್ಸವದ ವಿರುದ್ಧ ಅಪಪ್ರಚಾರ ನಿಲ್ಲಿಸಿ '

Published:
Updated:

ಕಾಸರಗೋಡು : ಉತ್ತರಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ ಪಾಲ್ಗೊಳ್ಳುವ ಡಿಸೆಂಬರ್ 16 ರಂದು ಮಧೂರಿನಲ್ಲಿ ನಡೆಯುವ ಹಿಂದೂ ಸಮಾಜೋತ್ಸವದ ಬಗ್ಗೆ ಮುಸ್ಲಿಂ ಲೀಗ್ ಮತ್ತು ಸಿಪಿಎಂ ನಡೆಸುತ್ತಿರುವ ಅಪಪ್ರಚಾರಗಳನ್ನು
ನಿಲ್ಲಿಸಬೇಕೆಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶ್ರೀಕಾಂತ್ ಹೇಳಿದ್ದಾರೆ.

' ಹಿಂದೂ ಸಮಾಜೋತ್ಸವಕ್ಕೆ ಅನುಮತಿ ನಿಷೇಧಿಸಲು ಸಂಚು ನಡೆಸಲಾಗುತ್ತಿದೆ . ಮುಸ್ಲಿಂ ಸಮಾಜದ ಹೆಸರಲ್ಲಿ ರಾಜಕೀಯ
ವ್ಯಾಪಾರ ನಡೆಸುವ ಮುಸ್ಲಿಂ ಲೀಗ್, ಹಿಂದೂಗಳು ಒಟ್ಟಾಗುವುದನ್ನು ಸಹಿಸುತ್ತಿಲ್ಲ. ಹಿಂದೂ ಸಮಾಜೋತ್ಸವದಲ್ಲಿ ದಾಂಧಲೆ
ಎಬ್ಬಿಸಲು ಲೀಗ್ ಮತ್ತು ಅದರ ಉಗ್ರಗಾಮಿ ಸಂಘಟನೆಗಳು ಸಂಚು ರೂಪಿಸಿವೆ. ಹಿಂದೂ ಸಮಾಜೋತ್ಸವದ ಪ್ರಚಾರಕ್ಕಾಗಿ
ಇಡಲಾದ ಬ್ಯಾನರ್, ಫಲಕ ಹಾಗೂ ಧ್ವಜಗಳನ್ನು ವ್ಯಾಪಕವಾಗಿ ನಾಶ ಮಾಡಲಾಗಿದೆ . ಹಲವೆಡೆಗಳಲ್ಲಿ ರಾತ್ರಿ ಹೊತ್ತು
ಪೊಲೀಸರೇ ಸಮಾಜೋತ್ಸವದ ಬ್ಯಾನರುಗಳನ್ನು ಹಾಗೂ ಫಲಕಗಳನ್ನು ಕಿತ್ತೊಗೆದಿದ್ದಾರೆ. ಈ ಎರಡೂ ಪಕ್ಷಗಳು ಉದ್ರಿಕ್ತ
ವಾತಾವರಣ ಸೃಷ್ಟಿಸಿ ಸಮಾಜೋತ್ಸವಕ್ಕೆ ಅಡ್ಡಿ ಪಡಿಸುವ ಗುರಿ ಹೊಂದಿವೆ. ಸಮಾಜೋತ್ಸವದಲ್ಲಿ ಪಾಲ್ಗೊಳ್ಳುವವರಿಗೆ ಹಾಗೂ ಅವರ ವಾಹನಗಳಿಗೆ ಪೊಲೀಸರು ರಕ್ಷಣೆ ನೀಡಬೇಕು ' ಎಂದು ಶ್ರೀಕಾಂತ್ ಹೇಳಿದ್ದಾರೆ.

'ಪ್ರಜಾಪ್ರಭುತ್ವಕ್ಕೆ ಹಾನಿ– ಮಾನವ ಹಕ್ಕು ಧ್ವಂಸ '

ಕಾಸರಗೋಡು: ಪ್ರಜಾಪ್ರಭುತ್ವಕ್ಕೆ ಹಾನಿ ತಟ್ಟಿದಲ್ಲಿ , ಅಂತಹ ದೇಶದಲ್ಲಿ ಮಾನವ ಹಕ್ಕುಗಳ ಧ್ವಂಸ ನಡೆಯಲಿದೆ ಎಂದು ಕಣ್ಣೂರು ವಿಶ್ವ  ವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಖಾದರ್ ಮಾಂಗಾಡ್ ಹೇಳಿದರು.

ವಿಶ್ವ ಮಾನವ ಹಕ್ಕು ದಿನಾಚರಣೆಯ ಅಂಗವಾಗಿ ಕಾಸರಗೋಡು ಮಾನವ ಹಕ್ಕು ರಕ್ಷಣಾ ಮಿಶನ್ ನಡೆಸಿದ ರಾಲಿ ಮತ್ತು
ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

' ರಾಜ್ಯದ 14 ಜಿಲ್ಲೆಗಳಲ್ಲಿ 13 ಜಿಲ್ಲೆಗಳ ಜನರೂ  ಪ್ರಳಯದಿಂದ ತತ್ತರಿಸಿದಾಗ ಕಾಸರಗೋಡು ಜಿಲ್ಲೆಯ ಜನರಿಗೆ ಯಾವುದೇ ಹಾನಿ ಉಂಟಾಗಾದೆ ಇರಲು ಈ ಜಿಲ್ಲೆಯಲ್ಲಿ ಒಂದೇ ಒಂದು ಅಣೆಕಟ್ಟೆ ಇಲ್ಲದಿರುವುದೇ ಕಾರಣ ಎಂದರು. ಆದರೆ, ರಾಜ್ಯ ಸರ್ಕಾರ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದೆ.'ಎಂದವರು ಹೇಳಿದರು.

ಸಂಘಟನೆಯ ಜಿಲ್ಲಾ ಅಧ್ಯಕ್ಷ ಕೂಕಳ್ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಬಾಲಾಮಣಿ ನಾಯರ್ , ಡಾ. ವಿನಯನ್, ಆರೋಗ್ಯಾಧಿಕಾರಿ ಬಿ.ಅಶ್ರಫ್,ರಾಘವ ಚೇರಾಲ್, ಮಹಮೂದ್ ಕೈಕಂಬ ,ಶೆರೀಫ್ ಮುಗು, ಯಶೋದಾ ಟೀಚರ್ ಮಾತನಾಡಿದರು. ಕಾರ್ಯ್ಯದರ್ಶಿ ಕೆ. ಬಿ. ಮುಹಮ್ಮದ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !