ಶಿರೂರು: ಬಂಕ್‌ನಲ್ಲಿ ನೌಕರ ಕೊಲೆ

7

ಶಿರೂರು: ಬಂಕ್‌ನಲ್ಲಿ ನೌಕರ ಕೊಲೆ

Published:
Updated:

ಬಾಗಲಕೋಟೆ: ತಾಲ್ಲೂಕಿನ ಶಿರೂರಿನಲ್ಲಿ ಬುಧವಾರ ಸಂಜೆ ಪೆಟ್ರೋಲ್ ಬಂಕ್‌ನಲ್ಲಿ ನೌಕರನ ಕೊಲೆ ನಡೆದಿದೆ. ಇದರಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. 

ಶರಣಪ್ಪ ಹಣಮಂತ ಹಿರೇಕುಂಬಿ (19) ಕೊಲೆಯಾದವರು. ಬೆಳಗಾವಿ–ರಾಯಚೂರು ರಾಜ್ಯ ಹೆದ್ದಾರಿಯ ಗುಳೇದಗುಡ್ಡ ಕ್ರಾಸ್ ಬಳಿ ಇರುವ ಬಂಕ್‌ಗೆ ನುಗ್ಗಿದ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಗುಳೇದಗುಡ್ಡದ ಜವಳಿ ಎಂಬುವವರಿಗೆ ಪೆಟ್ರೋಲ್ ಬಂಕ್ ಸೇರಿದೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ.

ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಕ್‌ನಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಕೈಗೊಂಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !