ಎಂಆರ್‌ಪಿಎಲ್‌ ಹಣಕಾಸು ನಿರ್ದೇಶಕ ಅಕ್ಷಯ್‌ ಕುಮಾರ್ ಸಾಹೂ ನಿಧನ

7

ಎಂಆರ್‌ಪಿಎಲ್‌ ಹಣಕಾಸು ನಿರ್ದೇಶಕ ಅಕ್ಷಯ್‌ ಕುಮಾರ್ ಸಾಹೂ ನಿಧನ

Published:
Updated:
Deccan Herald

ಮಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಮಂಗಳೂರು ಪೆಟ್ರೋಕೆಮಿಕಲ್ಸ್‌ ಅಂಡ್‌ ರಿಫೈನರಿ ಲಿಮಿಟೆಡ್‌ (ಎಂಆರ್‌ಪಿಎಲ್‌) ಹಣಕಾಸು ನಿರ್ದೇಶಕ ಅಕ್ಷಯ್‌ ಕುಮಾರ್ ಸಾಹೂ (55) ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ.

ಒಡಿಶಾದ ಉತ್ಕಲ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಸಾಹೂ, ಬೋಧನೆ, ಗಣಿಗಾರಿಕೆ, ಉತ್ಪಾದನಾ ವಲಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುದೀರ್ಘ ಅನುಭವ ಹೊಂದಿದ್ದರು. ಇನ್‌ಸ್ಟಿಟ್ಯೂಟ್‌ ಆಫ್‌ ಕಾಸ್ಟ್‌ ಅಕೌಂಟ್ಸ್‌ ಆಫ್‌ ಇಂಡಿಯಾದ ಸದಸ್ಯರೂ ಆಗಿದ್ದರು. 2016ರ ಫೆಬ್ರುವರಿ 1ರಿಂದ ಎಂಆರ್‌ಪಿಎಲ್‌ನ ಹಣಕಾಸು ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಬರಹ ಇಷ್ಟವಾಯಿತೆ?

  • 0

    Happy
  • 1

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !