ಶ್ರದ್ಧಾಭಕ್ತಿಯ ನಡುವೆ ಷಷ್ಠಿ ಆಚರಣೆ:; ದೇಗುಲಕ್ಕೆ ಪೊಲೀಸ್ ಕಣ್ಗಾವಲು

7
ಜಿಲ್ಲಾಡಳಿತ ನಿಷೇಧದಿಂದ ಸುಬ್ಬರಾಯ­ನ­ಪೇಟೆ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಾಲಯ­ದಲ್ಲಿ ನಡೆಯದ ಮಡೆ ಮಡೆಸ್ನಾನ

ಶ್ರದ್ಧಾಭಕ್ತಿಯ ನಡುವೆ ಷಷ್ಠಿ ಆಚರಣೆ:; ದೇಗುಲಕ್ಕೆ ಪೊಲೀಸ್ ಕಣ್ಗಾವಲು

Published:
Updated:
Deccan Herald

ಚಿಕ್ಕಬಳ್ಳಾಪುರ: ನಗರದ ಸುಬ್ಬರಾಯ­ನ­ಪೇಟೆ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಾಲಯ­ದಲ್ಲಿ ಗುರುವಾರ 40ನೇ ವರ್ಷದ ಸುಬ್ರಹ್ಮಣ್ಯೇಶ್ವರಸ್ವಾಮಿ ಬ್ರಾಹ್ಮಣರ ಷಷ್ಠಿ ಸಂತರ್ಪಣಾ ಕಾರ್ಯಕ್ರಮ ಶ್ರದ್ಧಾಭಕ್ತಿಯೊಂದಿಗೆ ಜರುಗಿತು. ಜಿಲ್ಲಾಡಳಿತ ನಿಷೇಧ ಹೇರಿದ ಕಾರಣ ಮಡೆ ಮಡೆಸ್ನಾನ ನಡೆಯಲಿಲ್ಲ.

ಷಷ್ಠಿ ಅಂಗವಾಗಿ ಬುಧವಾರ ಸಂಜೆ ದೇವಾಲಯದಲ್ಲಿ ಬಾಲಸುಬ್ರಮಣ್ಯ ಸ್ವಾಮಿ ಉಪನಯನ ಕಾರ್ಯಕ್ರಮ ನಡೆಯಿತು. ಗುರುವಾರ ಬೆಳಗಿನ ಜಾವ 3 ಗಂಟೆಯಿಂದಲೇ ಆರಂಭವಾದ ಪೂಜಾ ಕೈಂಕರ್ಯಗಳು 7 ಗಂಟೆ ವರೆಗೆ ಜರುಗಿದವು.

ಅರ್ಚಕರು ದೇಗುಲದಲ್ಲಿರುವ ಬಾಲಸುಬ್ರಮಣ್ಯ, ಲಕ್ಷ್ಮೀ ನರಸಿಂಹ, ಈಶ್ವರ ಮತ್ತು ಪಾರ್ವತಿ ದೇವಿ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ಅರ್ಚನೆ, ಅಲಂಕಾರ, ಮಂಗಳಾರತಿ ಸೇವೆ ಸಲ್ಲಿಸಿದರು.

ಮಧ್ಯಾಹ್ನ ಬ್ರಾಹ್ಮಣ ಸುವಾಸಿನಿಯರ ಪೂಜೆ, ವಟುಗಳ ಪೂಜೆ, ಅನ್ನದ ರಾಶಿ ಪೂಜೆ ಕೈಂಕರ್ಯಗಳು ನಡೆದವು. ಬೆಳಿಗ್ಗೆಯಿಂದಲೇ ದೇವಾಲಯತ್ತ ಮುಖ ಮಾಡಿದ ಭಕ್ತರು ವಿಶೇಷ ಪೂಜೆ ಸಲ್ಲಿಸುವ ಜತೆಗೆ ದೇವಸ್ಥಾನದ ಆವರಣದಲ್ಲಿರುವ ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸಿ ಹಾಲು, ಮೊಸರು, ತುಪ್ಪದಿಂದ ತನಿ ಎರೆಯುತ್ತಿದ್ದ ದೃಶ್ಯ ಕಂಡುಬಂತು.

ಸುಬ್ರಹ್ಮಣ್ಯೇಶ್ವರಸ್ವಾಮಿ ಮೂರ್ತಿ ಮೆರವಣಿಗೆ ಆಯೋಜಿಸಲಾಗಿತ್ತು. ಸುಬ್ಬರಾಯ­ನ­ಪೇಟೆ, ಗರ್ಲ್ಸ್‌ ಸ್ಕೂಲ್ ರಸ್ತೆ, ಬಜಾರ್ ರಸ್ತೆಯಲ್ಲಿ ಮೆರವಣಿಗೆ ಸಾಗಿ ದೇವಾಲಯದ ಬಳಿ ಬಂದು ಸಂಪನ್ನಗೊಂಡಿತು.

ಮಡೆಸ್ನಾನ ನಡೆಯುತ್ತದೆ ಎನ್ನುವ ಕಾರಣಕ್ಕೆ ದೇವಾಲಯದಲ್ಲಿ ಅಡುಗೆ ಮಾಡುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ದೇವಾಲಯಕ್ಕೆ ಬಂದ ಭಕ್ತರಿಗಾಗಿ ಸುಬ್ಬರಾಯ­ನ­ಪೇಟೆ ಮತ್ತು ಕಂದವಾರ ಬಾಗಿಲು ರಸ್ತೆಯ ಎರಡು ಮನೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

‘ಬಹುಹಿಂದಿನಿಂದ ಈ ದೇವಸ್ಥಾನದಲ್ಲಿ ಷಷ್ಠಿ ಆಚರಣೆ ವಿಂಜಭೃಣೆಯಿಂದ ನಡೆಯುತ್ತ ಬಂದಿತ್ತು. ನಾವು 40 ವರ್ಷಗಳಿಂದ ಇಲ್ಲಿ ಉರುಳು ಸೇವೆ ಸಲ್ಲಿಸುತ್ತ ಬಂದಿದ್ದೆವು. ಇಲ್ಲಿ ಬರೀ ಬ್ರಾಹ್ಮಣರು ಮಾತ್ರ ಉರುಳು ಸೇವೆ ಸಲ್ಲಿಸುತ್ತಿದ್ದರು. ಬೇರೆ ಯಾರಿಗೂ ಉರುಳಿ ಎಂದು ಹೇಳುತ್ತಿರಲಿಲ್ಲ. ಕೆಲವರ ದುರ್ಬುದ್ದಿಯಿಂದಾಗಿ ಮಡೆಸ್ನಾನ ನಿಂತಿದೆ. ಉಡುಪಿಯಲ್ಲಿ ಇರುವಂತೆ ಎಡೆಸ್ನಾನಕ್ಕಾದರೂ ವ್ಯವಸ್ಥೆ ಮಾಡಿಕೊಡಬೇಕಿತ್ತು’ ಎಂದು ಸುಬ್ಬರಾಯನ ಪೇಟೆ ನಿವಾಸಿ ಶಶಿಧರ್ ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !