ಕ್ರೀಡಾ ತರಬೇತುದಾರರ ನೇಮಕಾತಿ ನಿಯಮ ಶೀಘ್ರ

7

ಕ್ರೀಡಾ ತರಬೇತುದಾರರ ನೇಮಕಾತಿ ನಿಯಮ ಶೀಘ್ರ

Published:
Updated:

ಬೆಳಗಾವಿ: ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ಸಂಚಿತ ವೇತನದ ಆಧಾರದಲ್ಲಿ ನೇಮಕಗೊಂಡಿರುವ ಕ್ರೀಡಾ ತರಬೇತುದಾರರ ಹುದ್ದೆಗಳನ್ನು ಕಾಯಂಗೊಳಿಸಲು ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಶೀಘ್ರವೇ ರಚಿಸಲಾಗುವುದು ಎಂದು ಯುವಜನ ಮತ್ತು ಕ್ರೀಡಾ ಸಚಿವ ಜಿ.ಪರಮೇಶ್ವರ ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಅರುಣ್‌ ಶಹಾಪುರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ನಾನು ಭಾರತೀಯ ಅಥ್ಲೆಟಿಕ್ಸ್‌ ಫೆಡರೇಷನ್‌ನ ಉಪಾಧ್ಯಕ್ಷನಾಗಿದ್ದು, ಕ್ರೀಡಾ ಸಾಧನೆಯಲ್ಲಿ ತರಬೇತುದಾರರ ಮಹತ್ವ ಏನೆಂದು ಚೆನ್ನಾಗಿ ಅರಿವಿದೆ. ವಿದೇಶಿ ಕೋಚ್‌ಗಳಿಗೆ ಕೋಟಿಗಟ್ಟಲೆ ದುಡ್ಡು ನೀಡಲಾಗುತ್ತಿ‌ದೆ. ನಮ್ಮ ರಾಜ್ಯದ ತರಬೇತುದಾರರಿಗೂ ಅರ್ಹ ಸಂಭಾವನೆ ಸಿಗಬೇಕಾದ ಅಗತ್ಯ ಇದೆ’ ಎಂದರು.

‘ಹಿರಿಯ ಕ್ರೀಡಾ ತರಬೇತುದಾರರಿಗೆ ತಿಂಗಳಿಗೆ ₹ 70 ಸಾವಿರ, ಕಿರಿಯ ತರಬೇತುದಾರರಿಗೆ ₹ 26 ಸಾವಿರ, ಪದವೀಧರ ತರಬೇತುದಾರರಿಗೆ ₹ 31 ಸಾವಿರ ಹಾಗೂ ಪದವೀಧರ ಅನುಭವಿ ತರಬೇತುದಾರಿಗೆ ₹ 39,960 ಸಂಭಾವನೆ ನೀಡಲಾಗುತ್ತಿದೆ’ ಎಂದು ಪರಮೇಶ್ವರ ತಿಳಿಸಿದರು.

1996ರಲ್ಲಿ ನೇಮಕವಾಗಿರುವ ಅನೇಕ ತರಬೇತುದಾರರು ತೀರಾ ಕಡಿಮೆ ಸಂಭಾವನೆ ಸಿಗುತ್ತಿದೆ ಎಂದು ಅರುಣ್‌ ಶಹಾಪುರ ಹೇಳಿದರು. ಜೆಡಿಎಸ್‌ನ ಬಸವರಾಜ ಹೊರಟ್ಟಿ ಹಾಗೂ ಕಾಂಗ್ರೆಸ್‌ನ ಎಚ್‌.ಎಂ.ರೇವಣ್ಣ ಅವರೂ ತರಬೇತುದಾರರನ್ನು ಕಾಯಂಗೊಳಿಸವಂತೆ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !