ಕೊಡುಗೆ ಜಲಪಾತಕ್ಕೆ ಬಿದ್ದು ಬೆಂಗಳೂರಿನ ಯುವಕ ಸಾವು

7

ಕೊಡುಗೆ ಜಲಪಾತಕ್ಕೆ ಬಿದ್ದು ಬೆಂಗಳೂರಿನ ಯುವಕ ಸಾವು

Published:
Updated:

ಮೂಡಿಗೆರೆ: ತಾಲ್ಲೂಕಿನ ಬಾಳೂರು ಹೋಬಳಿಯ ಸುಂಕಸಾಲೆ ಸಮೀಪದ ದುರ್ಗದಹಳ್ಳಿಯಲ್ಲಿರುವ ಕೊಡುಗೆ ಜಲಪಾತದಲ್ಲಿ ಗುರುವಾರ ಈಜಲು ಹೋದ ಯುವಕ ಮುಳುಗಿ ಮೃತಪಟ್ಟಿದ್ದಾರೆ.

ಬೆಂಗಳೂರು ಸಮೀಪದ ಹಲಸೂರಿನ ಸುನೀಲ್ (21) ಮೃತರು. ಅಲ್ಲಿಯೇ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಸುನೀಲ್, ಪ್ರವಾಸಕ್ಕೆಂದು 12 ಜನರ ತಂಡದ ಜತೆಗೆ ಬುಧವಾರ ಬಂದಿದ್ದು, ಖಾಸಗಿ ಹೋಂಸ್ಟೇ ಒಂದರಲ್ಲಿ ತಂಗಿದ್ದರು.

ಗುರುವಾರ ದುರ್ಗದಹಳ್ಳಿಯ ಕೊಡುಗೆ ಜಲಪಾತಕ್ಕೆ ತೆರಳಿದ್ದ ವೇಳೆ, ಈಜಲು ನೀರಿಗಿಳಿದಿದ್ದು, ನೀರಿನಿಂದ ಮೇಲೆ ಬರಲಾಗದೇ ಮುಳುಗಿ ಮೃತಪಟ್ಟಿದ್ದಾರೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರು ಬಂದು ಶವಕ್ಕಾಗಿ ಹುಡುಕಾಟ ನಡೆಸಿದರು. ಬಳಿಕ ಬಾಳೆಹೊಳೆಯ ಮುಳುಗುತಜ್ಞ ಭಾಸ್ಕರ್ ಮತ್ತು ಸಮಾಜ ಸೇವಕ ಮಹಮ್ಮದ್ ಆರೀಫ್ ಬಂದು ಕಾರ್ಯಾಚರಣೆ ನಡೆಸಿ ತಡರಾತ್ರಿ ಶವವನ್ನು ಹೊರತೆಗೆದರು.

ಸುನೀಲ್ ಸಂಬಂಧಿಗಳು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಹಸ್ತಾಂತರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !