ಶುಕ್ರವಾರ, ಅಕ್ಟೋಬರ್ 18, 2019
24 °C

ಗಾಲ್ಫ್‌ ಕ್ಲಬ್‌ನಿಂದ ₹392 ಕೋಟಿ ನಷ್ಟ

Published:
Updated:

ಬೆಳಗಾವಿ: ಬೆಂಗಳೂರಿನ ಗಾಲ್ಫ್‌ ಕ್ಲಬ್‌ಗೆ ಕಡಿಮೆ ಬಾಡಿಗೆ ದರ ನಿಗದಿ ಪಡಿಸಿರುವುದರಿಂದ ₹392 ಕೋಟಿ ನಷ್ಟವಾಗಿದೆ ಎಂದು ಮಹಾಲೇಖಪಾಲರು ವರದಿ ನೀಡಿದ್ದಾರೆ. ಇದನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

ಶುಕ್ರವಾರ ವಿಧಾನ ಪರಿಷತ್‌ನಲ್ಲಿ ಟಿ.ಎ ಶರವಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 1987 ರಿಂದ 2008ರವರೆಗಿನ ವರದಿಯಲ್ಲಿ ನಷ್ಟ ಉಲ್ಲೇಖಿಸಲಾಗಿದೆ. 2021ರವರೆಗೆ ಗುತ್ತಿಗೆ ಇದೆ. 60 ಎಕರೆ ಭೂಮಿಗೆ 1992 ರಿಂದ 2021ರವರೆಗೆ ವಾರ್ಷಿಕ ₹10 ಸಾವಿರ ಬಾಡಿಗೆ ನಿಗದಿ ಮಾಡಲಾಗಿದೆ ಎಂದರು.

ಕಡಿಮೆ ಬಾಡಿಗೆಗೆ ಕೊಡಲು ಅವರೇನು ಧರ್ಮ ಕಾರ್ಯ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ ಶರವಣ, ಕನ್ನಡಿಗರಿಗೂ ಕೆಲಸ ಇಲ್ಲ. ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಗುತ್ತಿಗೆ ರದ್ದು ಮಾಡಿ ಬೇರೆ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Post Comments (+)