ಅದಮಾರು ಪರ್ಯಾಯ: ಬಾಳೆ ಮುಹೂರ್ತಕ್ಕೆ ಚಾಲನೆ

7

ಅದಮಾರು ಪರ್ಯಾಯ: ಬಾಳೆ ಮುಹೂರ್ತಕ್ಕೆ ಚಾಲನೆ

Published:
Updated:
Deccan Herald

ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದ ಮುಂದಿನ ಪರ್ಯಾಯ 2020ರ ಜನವರಿ 18ರಂದು ನಡೆಯಲಿದ್ದು, ಶುಕ್ರವಾರ ಬಾಳೆ ಮುಹೂರ್ತ ನೆರವೇರಿಸುವುದರ ಮೂಲಕ ಅದಮಾರು ಮಠವು ಪರ್ಯಾಯಕ್ಕೆ ಸಿದ್ಧತೆ ಆರಂಭಿಸಿತು.

ಅದಮಾರು ಮಠದ ಆವರಣದಲ್ಲಿ ಹಿರಿಯ ಯತಿ ವಿಶ್ವಪ್ರಿಯ ಸ್ವಾಮೀಜಿ ಹಾಗೂ ಕಿರಿಯ ಯತಿ ಈಶಪ್ರಿಯ ಸ್ವಾಮೀಜಿ ಅವರು ಬಾಳೆ ಮುಹೂರ್ತ ನೆರವೇರಿಸಿದರು. ಉಡುಪಿ ಕೃಷ್ಣಮಠದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಕಿರಿಯ ಯತಿಗಳ ಇಚ್ಛೆಯಂತೆ ಬಾಳೆ ಮುಹೂರ್ತ ಸಂದರ್ಭದಲ್ಲಿ 108 ಬಾಳೆ ಕಂದುಗಳನ್ನು ನೆಡಲಾಯಿತು. ಹಿಂದೆ ಪರ್ಯಾಯ ನಡೆಯುವ ಮಠದ ಆವರಣದಲ್ಲಿ ಸಾಂಕೇತಿಕವಾಗಿ ಒಂದು ಬಾಳೆ ಕಂದನ್ನು ಮಾತ್ರ ನೆಡಲಾಗುತ್ತಿತ್ತು.

ಸಂಪ್ರದಾಯ: ಪರ್ಯಾಯ ಅವಧಿಯಲ್ಲಿ ಅನ್ನದಾನವೂ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಬೇಕಾಗುವ ಬಾಳೆಎಲೆ ಹಾಗೂ ತುಳಸಿಯನ್ನು ಪರ್ಯಾಯ ಪೀಠಾರೋಹಣ ಮಾಡುವ ಶ್ರೀ ಮಠದಂದಲೇ ಪಡೆಯುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಅದರಂತೆ ಈ ಬಾಳೆ ಮುಹೂರ್ತ ನಡೆಸಲಾಯಿತು.  ಪರ್ಯಾಯ ಪೂರ್ವಸಿದ್ಧತೆಯ ಎರಡನೇ ಕಾರ್ಯಕ್ರಮವಾಗಿ ಜನವರಿ 30ರಂದು ಅಕ್ಕಿ ಮುಹೂರ್ತ ನಡೆಯಲಿದೆ. ಬಳಿಕ ಕ್ರಮವಾಗಿ ಕಟ್ಟಿಗೆ ಮುಹೂರ್ತ ಹಾಗೂ ಭತ್ತ ಮುಹೂರ್ತಗಳು ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !