ಬಿಗ್‌ ಬ್ಯಾಷ್‌ ಕ್ರಿಕೆಟ್‌: ಬ್ಯಾಟ್‌ನಲ್ಲೇ ಟಾಸ್‌!

7

ಬಿಗ್‌ ಬ್ಯಾಷ್‌ ಕ್ರಿಕೆಟ್‌: ಬ್ಯಾಟ್‌ನಲ್ಲೇ ಟಾಸ್‌!

Published:
Updated:

ಬೆಂಗಳೂರು: ಟೆಸ್ಟ್ ಕ್ರಿಕೆಟ್‌ನಲ್ಲಿ ಟಾಸ್‌ ಹಾಕುವ ಪದ್ಧತಿ ಬೇಕೇ ಬೇಡವೇ ಎಂಬುದು ಇತ್ತೀಚೆಗೆ ಚರ್ಚೆಗೆ ಗ್ರಾಸವಾದ ವಿಷಯ.

ಈ ಚರ್ಚೆಯ ನಡುವೆಯ ಆಸ್ಟ್ರೇಲಿಯಾದ ಬಿಗ್ ಬ್ಯಾಷ್‌ ಕ್ರಿಕೆಟ್ ಲೀಗ್ ಆಯೋಜಕರು ವಿಚಿತ್ರ ರೀತಿಯಲ್ಲಿ ಟಾಸ್‌ ಮಾಡುವ ಚಿಂತನೆ ನಡೆಸಿದ್ದಾರೆ. ಇದೇ 19ರಂದು ಆರಂಭವಾಗಲಿರುವ ಟೂರ್ನಿಯಲ್ಲಿ ಟಾಸ್‌ಗಾಗಿ ಬ್ಯಾಟ್‌ ಅನ್ನು ‘ಫ್ಲಿಪ್‌’ ಮಾಡಲಾಗುವುದು ಎಂದು ಕ್ರೀಡಾ ವೆಬ್‌ಸೈಟ್‌ಗಳು ವರದಿ ಮಾಡಿವೆ.

ನಾಣ್ಯದಲ್ಲಿ ಹೆಡ್ ಅಥವಾ ಟೇಲ್‌ ನೋಡುವಂತೆ, ಬ್ಯಾಟ್‌ನಲ್ಲಿ ‘ಹಿಲ್ಸ್’ ಅಥವಾ ‘ಫ್ಲ್ಯಾಟ್‌’ ಆಯ್ಕೆ ಮಾಡಲು ನಾಯಕರಿಗೆ ಅವಕಾಶವಿದೆ. ಇದಕ್ಕಾಗಿ ವಿಶಿಷ್ಟ ರೀತಿಯ ಬ್ಯಾಟ್‌ ವಿನ್ಯಾಸಗೊಳಿಸಲಾಗುವುದು ಎಂದು ಲೀಗ್‌ನ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !