ಸುಲಿಗೆಕೋರರ ಗ್ಯಾಂಗ್‌ನಲ್ಲಿ ಎಂಬಿಎ ಪದವೀಧರ!

7
ಕೆರೆ, ನೀರು ರಕ್ಷಣೆಗಾಗಿ ವಿಶೇಷ ಫೋಟೊಶೂಟ್

ಸುಲಿಗೆಕೋರರ ಗ್ಯಾಂಗ್‌ನಲ್ಲಿ ಎಂಬಿಎ ಪದವೀಧರ!

Published:
Updated:

ಬೆಂಗಳೂರು: ‌ಸಾಫ್ಟ್‌ವೇರ್ ಉದ್ಯೋಗಿಯನ್ನು ಅಡ್ಡಗಟ್ಟಿ ಚಿನ್ನದ ಸರ ಹಾಗೂ ಎರಡು ಮೊಬೈಲ್‌ಗಳನ್ನು ಕಿತ್ತುಕೊಂಡು ಹೋಗಿದ್ದ ಎಂಬಿಎ ಪದವೀಧರ ಸೇರಿ ಮೂವರನ್ನು ಮೈಕೊಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಕೋರಮಂಗಲದ ಪ್ರಭಾಕರನ್ ಅಲಿಯಾಸ್ ರಾಜ, ಬೆಳ್ಳಂದೂರಿನ ಚಂದನ್ ಹಾಗೂ ಕುಮಾರ ಅಲಿಯಾಸ್ ಕರಿಯ ಬಂಧಿತರು. ಆರೋಪಿಗಳು ನ.18ರ ರಾತ್ರಿ ಟಿ.ವಿ.ಭಾಸ್ಕರ್ ನಾರಾಯಣ ಎಂಬುವರಿಂದ ಸುಲಿಗೆ ಮಾಡಿದ್ದರು.

ಎಂಬಿಎ ಓದಿರುವ ಪ್ರಭಾಕರನ್, ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ. ಉಳಿದಿಬ್ಬರು ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆಯೊಂದರ ನೌಕರರು. ಇತ್ತೀಚೆಗೆ ಚಂದನ್, ಊಟ ಪಾರ್ಸಲ್ ಕೊಡಲು ಪ್ರಭಾಕರನ್‌ನ ಮನೆಗೆ ಹೋಗಿದ್ದ. ಆಗ ಅವರಿಬ್ಬರ ನಡುವೆ ಸ್ನೇಹ ಬೆಳೆದಿತ್ತು. ಬಳಿಕ ತನ್ನ ಗೆಳೆಯ ಕುಮಾರನನ್ನೂ ಆತನಿಗೆ ಪರಿಚಯಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಖರ್ಚಿಗೆ ಬೇಕಾದ ಹಣಕ್ಕಾಗಿ ಕೆಲಸದ ನಡುವೆಯೇ ಸುಲಿಗೆ ಮಾಡುವ ನಿರ್ಧಾರಕ್ಕೆ ಬಂದಿದ್ದ ಆರೋಪಿಗಳು, ರಾತ್ರಿ ವೇಳೆ ನಿರ್ಜನ ಪ್ರದೇಶಗಳಲ್ಲಿ ನಿಂತು ಕೃತ್ಯ ಎಸಗುತ್ತಿದ್ದರು. ಭಾಸ್ಕರ್ ಅವರು ಸ್ನೇಹಿತನನ್ನು ಭೇಟಿಯಾಗಲು ರಾತ್ರಿ 9.30ರ ಸುಮಾರಿಗೆ ಬಿಟಿಎಂ ಲೇಔಟ್ 2ನೇ ಹಂತಕ್ಕೆ ಬಂದಿದ್ದರು. ಈ ವೇಳೆ ಆರೋಪಿಗಳು ಚಾಕುವಿನಿಂದ ಬೆದರಿಸಿ ಸುಲಿಗೆ ಮಾಡಿದ್ದರು. ಅವರು ತೆಗೆದುಕೊಂಡು ಹೋಗಿದ್ದ ಮೊಬೈಲ್‌ನ ಜಾಡು ಹಿಡಿದೇ ಪೊಲೀಸರು ಪ್ರಕರಣ ಭೇದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !