ಲೋಕಸಭೆ ಚುನಾವಣೆ: ನಾನು ಟಿಕೆಟ್‌ ಆಕಾಂಕ್ಷಿ–ಐವನ್‌ ಡಿಸೋಜ

7

ಲೋಕಸಭೆ ಚುನಾವಣೆ: ನಾನು ಟಿಕೆಟ್‌ ಆಕಾಂಕ್ಷಿ–ಐವನ್‌ ಡಿಸೋಜ

Published:
Updated:
Deccan Herald

ಮಂಗಳೂರು: ‘ಮುಂದಿನ ಲೋಕಸಭೆ ಚುನಾವಣೆ ಸ್ಪರ್ಧೆಗೆ ಮಂಗಳೂರು ಕ್ಷೇತ್ರದಲ್ಲಿ ನಾನೂ ಆಕಾಂಕ್ಷಿ. ಸ್ಪರ್ಧೆಗೆ ಅವಕಾಶ ನೀಡುವಂತೆ ಈಗಾಗಲೇ ಹೈಕಮಾಂಡ್ ಬಳಿ ಮನವಿ ಮಾಡಿದ್ದು, ಟಿಕೆಟ್ ನೀಡುವ ನಿರೀಕ್ಷೆಯಿದೆ’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕ್ರೈಸ್ತ ಸಮುದಾಯದವರೂ ದೊಡ್ಡ ಸಂಖ್ಯೆಯ್ಲಲಿದ್ದೇವೆ. ಈ ಹಿನ್ನೆಲೆಯಲ್ಲಿ ನನಗೆ ಟಿಕೆಟ್ ನೀಡಬಹುದು ಎಂಬ ವಿಶ್ವಾಸವಿದೆ. ಟಿಕೆಟ್‌ ದೊರೆತರೆ ಖಂಡಿತವಾಗಿಯೂ ಗೆಲ್ಲುವ ಭರವಸೆ ಇದೆ. ಇದರ ಹೊರತಾಗಿ ಹೈಕಮಾಂಡ್‍ನ ಎಲ್ಲ ತೀರ್ಮಾನಗಳಿಗೆ ಬದ್ಧನಾಗಿರುತ್ತೇನೆ’ ಎಂದರು.

ಕೇಳುವ ಹಕ್ಕಿದೆ: ‘ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನಾನು ತಯಾರಿದ್ದೇನೆ’ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಐವನ್‌, ‘ಟಿಕೆಟ್‌ ಕೇಳುವ ಎಲ್ಲ ಹಕ್ಕು ಪೂಜಾರಿಯವರಿಗೂ ಇದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !