ದೂರು ರದ್ದುಪಡಿಸಲು ಬಜರಂಗದಳ ಮನವಿ

7

ದೂರು ರದ್ದುಪಡಿಸಲು ಬಜರಂಗದಳ ಮನವಿ

Published:
Updated:
Deccan Herald

ಕೋಲಾರ: ಕೋಮು ಸೌಹಾರ್ದ ವೇದಿಕೆ ಹೆಸರಿನಲ್ಲಿ ಬಜರಂಗದಳ ಸಂಯೋಜಕರ ವಿರುದ್ಧ ದಾಖಲಿಸಿರುವ ದೂರು ರದ್ದುಗೊಳಿಸುವಂತೆ ಒತ್ತಾಯಿಸಿ ಜಿಲ್ಲಾ ಬಜರಂಗದಳ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌ ಅವರಿಗೆ ನಗರದಲ್ಲಿ ಶನಿವಾರ ಮನವಿ ಸಲ್ಲಿಸಿದರು.

‘ದತ್ತಮಾಲಾ ಅಭಿಯಾನ, ಶೋಭಾಯಾತ್ರೆ ಹಾಗೂ ದತ್ತ ಜಯಂತಿಯನ್ನು ಜನ ಜಾಗೃತಿಗಾಗಿ ನಡೆಸಲಾಗುತ್ತಿದೆ. ಆದರೆ, ದತ್ತ ರಥಯಾತ್ರೆಗೆ ಅಡ್ಡಿಪಡಿಸುವ ದುರುದ್ದೇಶದಿಂದ ಕೋಮು ಸೌಹಾರ್ದ ವೇದಿಕೆ ಹೆಸರಿನಲ್ಲಿ ಕೆಲವರು ಬಜರಂಗದಳ ಪ್ರಾಂತ ಸಂಯೋಜಕರಾದ ಸುನಿಲ್ ಮತ್ತು ರಘು ವಿರುದ್ಧ ದೂರು ದಾಖಲಿಸಿರುವುದು ಖಂಡನೀಯ’ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

‘ಅನುಸೂಯ ಜಯಂತಿ, ಶೋಭಾಯಾತ್ರೆ ಮತ್ತು ದತ್ತ ಜಯಂತಿ ಬೆಂಬಲಿಸಿ ವ್ಯಾಪಕ ಹೋರಾಟ ನಡೆಯುತ್ತದೆ ಎಂಬ ಕಾರಣಕ್ಕೆ ಗೌಸ್‌ ಮುನೀರ್‌ ಎಂಬುವರು ಕೋಮು ಸೌಹಾರ್ದ ವೇದಿಕೆ ಹೆಸರಿನಲ್ಲಿ ದೂರು ಕೊಟ್ಟಿದ್ದಾರೆ. ಈ ಸಂಘಟನೆಯ ಹುನ್ನಾರ ಅರಿಯದೆ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿದ್ದಾರೆ’ ಎಂದು ಸಂಘಟನೆಯ ಜಿಲ್ಲಾ ಘಟಕದ ಸಂಚಾಲಕ ಬಾಬು ಆರೋಪಿಸಿದರು.

‘ಸುಳ್ಳು ಮೊಕದ್ದಮೆ ರದ್ದುಗೊಳಿಸದಿದ್ದರೆ ರಾಜ್ಯದೆಲ್ಲೆಡೆ ಹೋರಾಟ ನಡೆಸುತ್ತೇವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತ ಮಾಲಾ ಅಭಿಯಾನದಿಂದ ದತ್ತ ಜಯಂತಿವರೆಗೆ ಯಾವುದೇ ಅಹಿತಕರ ಘಟನೆ ನಡೆದರೆ ಅಲ್ಲಿನ ಪೊಲೀಸ್‌ ಅಧಿಕಾರಿಗಳೇ ಹೊಣೆ’ ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ಸಂಘಟನೆಯ ಜಿಲ್ಲಾ ಸಹ ಸಂಚಾಲಕ ಚಲಪತಿ, ಸದಸ್ಯರಾದ ಬಾಲಾಜಿ, ವಿಶ್ವನಾಥ್, ಭವಾನಿ, ಮಂಜುನಾಥ್, ರಾಜೇಶ್, ಚಲಪತಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !