ಪೈವಳಿಕೆ ಕಂಬಳ: ಎಫ್‌ಐಆರ್‌ ದಾಖಲು

7

ಪೈವಳಿಕೆ ಕಂಬಳ: ಎಫ್‌ಐಆರ್‌ ದಾಖಲು

Published:
Updated:

ಮಂಗಳೂರು: ಕಾಸರಗೋಡು ಜಿಲ್ಲೆಯ ಪೈವಳಿಕೆಯಲ್ಲಿ ಪೊಲೀಸರ ಸೂಚನೆಯನ್ನು ಮೀರಿ ಶನಿವಾರ ‘ಅಣ್ಣ– ತಮ್ಮ’ ಜೋಡುಕರೆ ಕಂಬಳ ನಡೆಸಿರುವ ಸಂಘಟಕರ ವಿರುದ್ಧ ಮಂಜೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ ನಿಷೇಧ ಇರುವುದರಿಂದ ಕೇರಳದಲ್ಲಿ ಕಂಬಳ ನಡೆಸಲು ಅವಕಾಶವಿಲ್ಲ. ಈ ಸಂಬಂಧ ಪ್ರಾಣಿ ದಯಾ ಸಂಘಟನೆ (ಪೇಟಾ) ಸಲ್ಲಿಸಿದ್ದ ದೂರನ್ನು ಆಧರಿಸಿ, ಪೈವಳಿಕೆ ಕಂಬಳ ನಡೆಸದಂತೆ ಕಾಸರಗೋಡು ಎಸ್‌ಪಿ ಎ.ಶ್ರೀನಿವಾಸ್‌ ಸಂಘಟಕರಿಗೆ ಶುಕ್ರವಾರ ನೋಟಿಸ್‌ ಜಾರಿ ಮಾಡಿದ್ದರು. ಅದನ್ನು ಲೆಕ್ಕಿಸದೇ ಸಂಘಟಕರು ಕಂಬಳ ನಡೆಸಿದ್ದರು.

ಸುಪ್ರೀಂಕೋರ್ಟ್‌ ತೀರ್ಪು ಉಲ್ಲಂಘನೆ ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆ ಉಲ್ಲಂಘನೆ ಆರೋಪದಡಿ ಕಂಬಳ ಸಂಘಟಕರ ವಿರುದ್ಧ ಮಂಜೇಶ್ವರ ಠಾಣೆಯಲ್ಲಿ ಶನಿವಾರ ಸಂಜೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲು ಮಾಡಲಾಗಿದೆ. ಭಾರತೀಯ ದಂಡ ಸಂಹಿತೆ ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !