‘ನ್ಯಾಕ್’ ಹೆಸರಿನಲ್ಲಿ ನಕಲಿ ಪ್ರಮಾಣ ಪತ್ರ

7
ಮುಂಬೈನ ‘ವಿ ಮೇಕ್ ಡ್ರೀಮ್ ಇಂಡಿಯಾ’ ಕಂಪನಿ ವಿರುದ್ಧ ಎಫ್‌ಐಆರ್

‘ನ್ಯಾಕ್’ ಹೆಸರಿನಲ್ಲಿ ನಕಲಿ ಪ್ರಮಾಣ ಪತ್ರ

Published:
Updated:

ಬೆಂಗಳೂರು: ನಗರದ ಹಲವು ಕಾಲೇಜುಗಳ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ (ನ್ಯಾಕ್) ಹೆಸರಿನಲ್ಲಿ ನಕಲಿ ಪ್ರಮಾಣ ಪತ್ರಗಳನ್ನು ವಿತರಿಸಿದ ಆರೋಪದ ಮೇಲೆ ಮುಂಬೈನ ಕಂಪನಿಯೊಂದರ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಿ ಮೇಕ್ ಡ್ರೀಮ್ ಇಂಡಿಯಾ’ ಕಂಪನಿಯು ನಕಲಿ ಪ್ರಮಾಣ ಪತ್ರ ನೀಡಿರುವುದಾಗಿ ನ್ಯಾಕ್‌ ಸಂಸ್ಥೆಯ ಅಡಳಿತಾಧಿಕಾರಿ ಎಂ. ಅರುಣ್ ಡಿ.10ರಂದು ದೂರು ನೀಡಿದ್ದಾರೆ. ‌‘ಕಂಪನಿಯ ಮುಖ್ಯಕಚೇರಿ ಮುಂಬೈನಲ್ಲಿದ್ದು, ಅದರ ಘಟಕ ಬೆಂಗಳೂರಿನಲ್ಲಿದೆ. ಇಲ್ಲಿಯ ಪ್ರತಿನಿಧಿಗಳೇ ನಕಲಿ ಪ್ರಮಾಣ ವಿತರಿಸಿರಿವುದು ಗೊತ್ತಾಗಿದೆ’ ಎಂದು ಜ್ಞಾನಭಾರತಿ ಪೊಲೀಸರು ಹೇಳಿದ್ದಾರೆ.

ದೂರಿನ ವಿವರ: ‘ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಮೌಲ್ಯಮಾಪನ ಮತ್ತು ಮಾನ್ಯತೆ ನಿರ್ಧರಿಸುವ ಕೆಲಸವನ್ನು ನ್ಯಾಕ್ ಸಂಸ್ಥೆ ಮಾಡುತ್ತಿದೆ. ಬೆಂಗಳೂರಿನಲ್ಲಿ ಸಂಸ್ಥೆಯ ಘಟಕವಿದೆ’ ಎಂದು ಎಂ. ಅರುಣ್ ದೂರಿನಲ್ಲಿ ವಿವರಿಸಿದ್ದಾರೆ.

‘ವಿಚಾರ ಸಂಕಿರಣ ನಡೆಸುವ ಸಂಬಂಧ ‘ವಿ ಮೇಕ್ ಡ್ರೀಮ್ ಇಂಡಿಯಾ’ ಕಂಪನಿಯು ನ್ಯಾಕ್‌ನಿಂದ ಯಾವುದೇ ಅನುಮತಿ ಪಡೆದಿಲ್ಲ. ಅಷ್ಟಾದರೂ ಜಾಹೀರಾತು ನೀಡಿದ್ದ ಕಂಪನಿ,‌‌ ನ್ಯಾಕ್‌ ಪ್ರಮಾಣ ಪತ್ರ ನೀಡುವುದಾಗಿ ಹೇಳಿತ್ತು. ಅದನ್ನು ನಂಬಿ ವಿದ್ಯಾರ್ಥಿಗಳು, ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು. ನ್ಯಾಕ್‌ ಸಂಸ್ಥೆಯ ನಿರ್ದೇಶಕರ ನಕಲಿ ಸಹಿ ಇರುವ ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದೆ’ ಎಂದು ಅರುಣ್‌  ಆರೋಪಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !